ಸುಬ್ರಹ್ಮಣ್ಯ : ದೇವರ ದರ್ಶನ ವೇಳೆ ಕಳ್ಳರು ಮಹಿಳೆಯೋರ್ವರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಎಗರಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆದಿದೆ.
ಕಡಬ ತಾಲೂಕಿನ ಇಚ್ಲಂಪಾಡಿ ಬರೆಮೇಲು ನಿವಾಸಿ ಭಾರತಿ ಎಮ್ ಡಿ ಎಂಬವರು ಅ.22ರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಂದರ್ಭ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ಕಾಣೆಯಾಗಿತ್ತು. ಬಳಿಕ ಕರಿಮಣಿ ಸರಕ್ಕಾಗಿ ದೇಗುಲದ ವಠಾರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

























