ಮಂಗಳೂರು : ಸೈಬರ್ ಕಳ್ಳರು ಅಮಾಯಕರ ಬೆನ್ನ ಹಿಂದೆ ಬಿದ್ದು ಹಣ ವಂಚಿಸುವ ಕಾಲ ಮುಗಿದು ಹೋಯ್ತು., ಇದೀಗ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ವಂಚನೆಯನ್ನು ಆರಂಭಿಸಿದ್ದಾರೆ. ಇದೀಗ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರ ಹೆಸರಿನಲ್ಲೂ ಸೈಬರ್ ಕಳ್ಳರು ಹಣ ಮಾಡಲು ಮುಂದಾಗಿದ್ದಾರೆ.
ಇದೀಗ ಅಪರಿಚಿತರಿಂದ ಆಯುಕ್ತರ ಹೆಸರಿನಲ್ಲಿಯೇ ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ದುಡ್ಡು ಮಾಡಲು ಹೊರಟಿರುವ ವಿಚಾರ ಬೆಳಕಿಗೆ ಬಂದಿದೆ.
ವಾಟ್ಸಾಪ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ. ತನ್ನನ್ನು ಪೊಲೀಸ್ ಆಯುಕ್ತ ಎಂದು ಪರಿಚಯಿಸಿಕೊಂಡ ಅಪರಿಚಿತ ವಂಚಕ ನಗರದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕಮಿಷನರ್ ಅವರ ಜೊತೆಗೆ ಪರಿಚಯ ಇರುವ ಹಲವು ಮಂದಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಖುದ್ದು ಕಮಿಷನರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲು ಪೊಲೀಸರು ಸೈಬರ್ ವಂಚಕರ ಬೆನ್ನ ಹಿಂದೆ ಬಿದ್ದಿದ್ದಾರೆ.
“ನಾನು ಪೊಲಿಸ್ ಆಯುಕ್ತ ಅನುಪಮ್ ಅಗರ್ವಾಲ್, ನಾನು ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಮಾಡುತ್ತಿಲ್ಲ. ಅರ್ಜೆಂಟಾಗಿ ಹಣ ಟ್ರಾನ್ಸ್‌ಫರ್ ಮಾಡಿ. ಒಂದು ಗಂಟೆಯೊಳಗೆ ವಾಪಾಸ್ ಮಾಡುತ್ತೇನೆ” ಎಂದು ಸೈಬರ್ ಕಳ್ಳರು ತಿಳಿಸಿದ್ದಾರೆ. ಅಲ್ಲದೆ ಕರೆ ಮಾಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಇದು ಸೈಬರ್ ಕಳ್ಳರ ಕೃತ್ಯ ಎಂದು ಗೊತ್ತಾಗಿದೆ.
ಯಾರು ಈ ಮೆಸೇಜ್ ಗೆ ಮಾರು ಹೋಗಬೇಡಿ.ಇದು ಸುಳ್ಳು ಸಂದೇಶ ನನ್ನ ಹೆಸರು ಬಳಕೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.


























