ಪುತ್ತೂರು : ಪೊಲೀಸ್ ತನಿಖೆಯ ಕಥಾವಸ್ತು ಹೊಂದಿರುವ ಮಲಯಾಳಂ ಖ್ಯಾತ ನಟ ಮಮ್ಮೂಟ್ಟಿ ನಟನೆಯ ‘ಕಣ್ಣೂರು ಸ್ಕ್ವಾಡ್’ ಸಿನಿಮಾವನ್ನು ಪೊಲೀಸರಿಗಾಗಿ ವಿಶೇಷ ಉಚಿತ ಶೋ ಅ.26 ರಂದು ಏರ್ಪಡಿಸಲಾಗಿತ್ತು.

ಭಾರೀ ಹಿಟ್ ಕಂಡ ಕ್ರೈಂ ಥ್ರಿಲ್ಲರ್ ‘ಕಣ್ಣೂರು ಸ್ಕ್ವಾಡ್’ ಸಿನಿಮಾವನ್ನು ಪುತ್ತೂರಿನ ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ವತಿಯಿಂದ ಜಿಎಲ್ ವನ್ ಮಾಲ್ ನಲ್ಲಿ ಪುತ್ತೂರು ವಿಭಾಗದ ಪೊಲೀಸ್ ವ್ಯಾಪ್ತಿಯ ಪೊಲೀಸರಿಗೆ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು.
ಪುತ್ತೂರು ನಗರ, ಮಹಿಳಾ ಠಾಣೆ, ಟ್ರಾಫಿಕ್, ಸುಳ್ಯ, ಬೆಳ್ಳಾರೆ, ಕಡಬ, ಉಪ್ಪಿನಂಗಡಿ ಸಹಿತ ಎಲ್ಲಾ ಠಾಣೆಗಳಿಂದ ಬಂದ 150ಕ್ಕೂ ಮಿಕ್ಕಿ ಪೊಲೀಸ್ ಸಿಬ್ಬಂದಿ ಸಿನಿಮಾ ವೀಕ್ಷಣೆ ಮಾಡಿದರು.
ಪುತ್ತೂರು ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್, ಜಿ.ಎಲ್. ಸಂಸ್ಥೆ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಕೂಡ ಸಿನಿಮಾ ವೀಕ್ಷಿಸಿದರು.
ಮಾಲ್ ಮ್ಯಾನೇಜರ್ ಸಂತೋಷ್ ನಾಯಕ್ ಆಜೇರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ರೋಬಿ ವರ್ಗೀಸ್ ನಿರ್ದೇಶನದ ಈ ಸಿನಿಮಾಗೆ ಮಹಮ್ಮದ್ ಶಫೀ ಚಿತ್ರಕಥೆ ಬರೆದಿದ್ದಾರೆ. ನಟ ಮಮ್ಮೂಟ್ಟಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕಣ್ಣೂರು ಎಸ್ಪಿ ಶ್ರೀಜಿತ್ ಐಪಿಎಸ್ ಅವರ ನೈಜ ಕಥೆ ಆಧರಿಸಿದ್ದಾಗಿದೆ.
28 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ 150ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಗಿಟ್ಟಿಸಿಕೊಂಡು ಈಗಲೂ ಮಂಗಳೂರು ಸಹಿತ ಹಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.


























