ಕಿವಿ ಸೂಕ್ಷ್ಮವಾದ ಅಂಗ. ಸ್ಪಲ್ವ ನೋವಾದರು ಸಹ ಜೀವವೇ ಹಾರಿ ಹೋದಂತಹ ಅನುಭವವಾಗುವುದು ಸಹಜ. ಆದರೆ ಇಲ್ಲೊಂದು ಮಹಿಳೆಯ ಕಥೆ ಕೇಳಿದ್ರೆ ಮಾತ್ರ ವಿಚಿತ್ರ ಎಂದೆನಿಸುತ್ತದೆ. ಯಾಕೆ ಗೊತ್ತಾ?. ಕಿವಿಯೊಳಗೆ ಜೇಡವೊಂದು ಅಡಗಿ ಕುಳಿತ್ತಿದ್ದು, 4 ದಿನಗಳ ಬಳಿಕ ಆ ವಿಚಾರ ಆಕೆಗೆ ಗೊತ್ತಾಗಿದೆ.
ಅಂದಹಾಗೆಯೇ ಈ ಘಟನೆ ತೈಮಾನ್ನಲ್ಲಿ ನಡೆದಿದೆ. 64 ವರ್ಷದ ಮಹಿಳೆಯ ಕಿವಿಯಲ್ಲಿ ಶಬ್ಧವೊಂದು ಬರಲಾರಂಭಿಸುತ್ತದೆ. 4 ದಿನಗಳಿಂದ ಕಿವಿಯೊಳಗೆ ಬರುತ್ತಿದ್ದ ಶಬ್ಧದಿಂದ ಮಹಿಳೆ ಬೇಸತ್ತಿದ್ದಳು. ಕಾರಣ ಆಕೆಗೆ ಕಿವಿ ನೋಯಲಾರಂಭಿಸಿದೆ. ನಿದ್ರೆಗೂ ಭಂಗವಾಗಿದೆ. ಕೊನೆಗೆ ಮಹಿಳೆ ವೈದ್ಯರನ್ನು ಭೇಟಿ ಮಾಡಿದ್ದಾಳೆ.
ವೈದ್ಯರು ಸಹ ಕಿವಿ, ಮೂಗು, ಗಂಟಲು ಭಾಗವನ್ನು ಪರೀಕ್ಷಿಸಿದ್ದಾರೆ. ಬಳಿಕ ಕಿವಿಯನ್ನೇ ಸೂಕ್ಷ್ಮವಾಗಿ ಗಮನಿಸಿದಾಗ ಚಿಕ್ಕ ಎರಡು ಜೇಡಗಳು ಅಡಗಿ ಕುಳಿತಿರುವುದನ್ನು ಕಂಡು ಡಾಕ್ಟರ್ ಹೌಹಾರಿದ್ದಾರೆ. ಆ ನಂತರ ಟ್ಯೂಬ್ ಬಳಸಿ ಕಿವಿ ತಮಟೆಗೆ ತೊಂದರೆ ಆಗದಂತೆ ಜೇಡವನ್ನು ಕಿವಿಯಿಂದ ಹೊರತೆಗೆದಿದ್ದಾರೆ.


























