ಪುತ್ತೂರು : ಮಹಿಳೆಯೋರ್ವರು ಹೆರಿಗೆ ವೇಳೆ ಮೃತಪಟ್ಟ ಘಟನೆ ನಡೆದಿದೆ.
ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಸದಸ್ಯರಾದ ಪರ್ಲಡ್ಕ ಅಬ್ದುಲ್ ರಶೀದ್ ಹಾಜಿ ರವರ ಪ್ರಥಮ ಪುತ್ರಿ, ಮೂಲತಃ ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದ ಮರ್ಹೂಮ್ ಅಬೂಬಕ್ಕರ್ ಪಟ್ಲಮೂಲೆ ರವರ ಮಗ, ಮಾಡಾವು ನಿವಾಸಿ, ಗಲ್ಫ್ ನ ಒಮಾನ್ ನಲ್ಲಿ ಉದ್ಯೋಗಿಯಾಗಿರುವ ಮಹಮ್ಮದ್ ರಫೀಕ್ ರವರ ಪತ್ನಿ ರಮೀಝ ಮೃತ ಮಹಿಳೆ.
ರಮೀಝ ರವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಮೂರನೇ ಹೆರಿಗೆ ವೇಳೆ ಮೃತಪಟ್ಟಿದ್ದಾರೆ.
ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಮೂರನೇ ಮಗುವಿನ ಹೆರಿಗೆ ವೇಳೆ ರಮೀಝ ಮೃತಪಟ್ಟಿದ್ದು, ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ.
ಮೃತರು ಪತಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























