ವಿಟ್ಲ : ಶ್ರೀವರ ಯುವಕ ಮಂಡಲ ರಿ. ಪೂರ್ಲಪ್ಪಾಡಿ ವಿಟ್ಲಪಡ್ನೂರು ಗ್ರಾಮ ಇದರ ಎರಡನೇ ವರ್ಷದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪೂರ್ಲಪ್ಪಾಡಿ ಶ್ರೀವರ ವೇದಿಕೆ ವಠಾರದಲ್ಲಿ ನಡೆಯಿತು.

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಸೋಮನಾಥ ಗೌಡ ಕೆ., ಗೌರವಾಧ್ಯಕ್ಷರಾಗಿ ಈಶ್ವರ ಭಟ್ ಪಿ., ಗೌರವ ಸಲಹೆಗಾರರಾಗಿ ವಕೀಲರು ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ಪ್ರಜೇಶ್ ಕೆ., ಕಾರ್ಯದರ್ಶಿಯಾಗಿ ಸಂತೋಷ್, ಕೋಶಾಧಿಕಾರಿಯಾಗಿ ಯೋಗೀಶ್ ಪಿ., ಕ್ರೀಡಾ ಕಾರ್ಯದರ್ಶಿ ತೇಜಸ್ ಕೆ., ಜೊತೆ ಕಾರ್ಯದರ್ಶಿ ಯತೀಶ್ ಪಿ., ಸಹ ಕೋಶಾಧಿಕಾರಿ ಮನೋಜ್ ಪಿ., ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಶಾಂತ ಪಿ., ಚೇತನ್ ಕುಮಾರ್ ಪಿ.ಕೆ., ಲೋಕೇಶ್ ಕೆ., ವಿಜಯ ಪಿ., ದೇವಪ್ರಸಾದ್ ಕೆ., ಮಾಧ್ಯಮ ಪ್ರಮುಖರಾಗಿ ರಾಕೇಶ್, ಭರತ್ ಕುಮಾರ್, ಜಯಪ್ರಕಾಶ್ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣ ಗೌಡ ಕೆ., ಹೇಮಂತ್ ಪಿ., ಶಿವರಾಜ್ ಪಿ., ಕಿರಣ್ ಚಂದ್ರ ಆಳ್ವ, ರೋಹಿತ್ ಪಿ., ರಂಜನ್ ಪಿ.ಜೆ., ರುಕುಮ ಗೌಡ ಪಿ., ಗಿರೀಶ್ ಪಿ.ಆರ್., ರಾಜೇಶ್ ಎಂ.ಎನ್. ರವರು ಆಯ್ಕೆಯಾದರು.


























