ಬೆಳ್ತಂಗಡಿ : ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಬೆಳಾಲು ಮತ್ತು ಉಜಿರೆ ಗ್ರಾಮದ ಗಡಿ ಪ್ರದೇಶ ಮಾಚಾರು ಸಮೀಪ ಕೆಂಪನೊಟ್ಟುನಲ್ಲಿ ನಡೆದಿದೆ.
ಮಾಚಾರು ನಿವಾಸಿ ಶಶಿಕಲಾ ಮೃತ ಮಹಿಳೆ.
ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯೋ, ಆಕಸ್ಮಿಕವೋ ಎಂಬ ವಿಚಾರ ತನಿಖೆಯ ನಂತರ ತಿಳಿಯಬೇಕಿದೆ.


























