ಪುತ್ತೂರು : ಕಟ್ಟಡಕ್ಕೆ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಹಾಗೂ ಇತರ ಇಲೆಕ್ಟ್ರಿಕ್ ಸ್ವತ್ತುಗಳನ್ನು ಹಾಗೂ ಕಟ್ಟಡದ ಒಳಗೆ 4 ಗೋಣಿಚೀಲಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಮತ್ತು ಪಾತ್ರೆ ಸಾಮಾಗ್ರಿಗಳನ್ನು ಕಳವು ಮಾಡಿರುವುದಾಗಿ ಆರೋಪಿಸಿ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪೆರುವಾಜೆ ನಿವಾಸಿ, ಅಮರನಾಥ ಶೆಟ್ಟಿ ಎಂಬವರು ನೀಡಿರುವ ದೂರಿನ ಮೇರೆಗೆ ಹರೀಶ್ ರೈ, ರೇಷ್ಮಾ, ಕಿರಣ್, ಕಿಶೋರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮರನಾಥ ಶೆಟ್ಟಿ ಎಂಬವರು ಸುಳ್ಯ ತಾಲೂಕು ಪೆರುವಾಜೆ ಗ್ರಾಮದಲ್ಲಿ ಕಟ್ಟಡವನ್ನು ಹೊಂದಿದ್ದು, ಸದ್ರಿ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್, ಬಲ್ಬ್ ಇತ್ಯಾದಿ ಎಲೆಕ್ಟ್ರಿಕ್ ಸ್ವತ್ತುಗಳು, ಕಟ್ಟಡದ ಒಳಗೆ 4 ಗೋಣಿಚೀಲ ಗಳಲ್ಲಿ ಸಂಗ್ರಹಿಸಿಟ್ಟ ಹಣ್ಣು ಅಡಿಕೆ ಹಾಗೂ ಪಾತ್ರೆ ಸಾಮಾಗ್ರಿ ಇತ್ಯಾದಿ ಸ್ವತ್ತುಗಳನ್ನು ನ.1-3ರ ಮಧ್ಯೆ ಅವಧಿಯಲ್ಲಿ ಹರೀಶ್, ರೇಷ್ಮಾ, ಕಿರಣ, ಕಿಶೋರ್ ಎಂಬವರು ತೆಗೆದುಕೊಂದು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ರಾಣೆಯಲ್ಲಿ ಅ.ಕ್ರ -73/2023 ಕಲಂ : 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























