ಬೂಡಿಯಾರು ಹೊಸಮನೆ : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವರ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮೊತ್ಸವವು ಡಿ 09 ಮತ್ತು 10 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ತಂತ್ರಿಗಳಾದ ಪ್ರೀತಮ್ ಪುತ್ತೂರಾಯರ ರು ಹಾಗೂ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಗಂಗಾಧರ ಅಮೀನ್ ಹೊಸಮನೆ ಬಿಡುಗಡೆಗೊಳಿಸಿ, ಜಾತ್ರೋತ್ಸವ ದ ರೂಪು ರೇಷೆ ಗಳನ್ನು ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾ ದ ಶ್ರೀ ಸಿ ಟಿ ಸುರೇಶ್, ಕಾರ್ಯದರ್ಶಿ,ಜಯಂತ್ ಶೆಟ್ಟಿ ಕಂಬಳತಡ್ಡ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.



























