ಬೆಳ್ತಂಗಡಿ : ಜಾಗದ ವಿಚಾರವಾಗಿ ಮಹಿಳೆಯರ ಜೊತೆ ತಂಡವೊಂದು ಅನುಚಿತವಾಗಿ ವರ್ತಿಸಿರುವುದಲ್ಲದೇ, ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು ನೀಡಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಒಟಿ ಜಾರ್ಜ್, ಒಟಿ ಕುರಿಯಾಕೋಸ್, ಪ್ರಮೋದ್ ಟಿಎಂ, ಮ್ಯಾಥ್ಯೂ ಟಿಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ಹಾಗೂ ಆಪಾದಿತರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದ್ದು, ನ.7 ರಂದು ಮಧ್ಯಾಹ್ನ ಮಹಿಳೆಯ ಮನೆಯಾದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮಹಿಳೆಯ ಪತಿಯ ಸ್ವಾಧೀನದಲ್ಲಿರುವ ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಖಾಸಗಿ ಸರ್ವೇಯವರ ಮೂಲಕ ಅಳತೆ ಮಾಡಲು ಬಂದಾಗ ಮಹಿಳೆ ಮತ್ತು ಮನೆಯವರು ತಡೆಯಲು ಹೋಗಿದ್ದು, ಆ ಸಮಯ ಮಹಿಳೆ ಮತ್ತು ಮಹಿಳೆಯೊಂದಿಗೆ ಇದ್ದ ಇನ್ನೋರ್ವ ಮಹಿಳೆಯ ಜೊತೆ ಆರೋಪಿಗಳಾದ ಒಟಿ ಜಾರ್ಜ್, ಒಟಿ ಕುರಿಯಾಕೋಸ್, ಪ್ರಮೋದ್ ಟಿಎಂ, ಮ್ಯಾಥ್ಯೂ ಟಿಕೆ ಎಂಬವರುಗಳು ಅನುಚಿತವಾಗಿ ವರ್ತಿಸಿರುವುದಲ್ಲದೇ, ಕೈಯಿಂದ ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಹೋದ ಮಹಿಳೆಯ ಪತಿಗೂ ಕೈಯಿಂದ ಹಲ್ಲೆ ನಡೆಸಿ., ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 88/2023 ಕಲಂ: 447.323.354.504.506.R/W.34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























