ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಇಸ್ರೋ ವಿಕ್ರಮ ಕಾರ್ಯಕ್ರಮವು ನವೆಂಬರ್ 11 ರಂದು ಬೆಳಿಗ್ಗೆ 9 ಗಂಟೆಗೆ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಭಾರತೀಯ ಇಸ್ರೋ ಸಂಸ್ಥೆಯ ಎಲ್ಪಿಎಸ್ಸಿಯ ಜನರಲ್ ಮ್ಯಾನೇಜರ್ ಕೃಷ್ಣಮೋಹನ್ ಶಾನ್ಭಾಗ್ ಮತ್ತು ಇಸ್ರೋ ಸಂಸ್ಥೆಯ ಉಪನಿರ್ದೇಶಕ ಶಂಭಯ್ಯ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಬೆಳಿಗ್ಗೆ 9.30 ರಿಂದ 11 ಗಂಟೆವರೆಗೆ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತು 11.15 ರಿಂದ 12.45 ವರೆಗೆ ಪುತ್ತೂರು ತಾಲೂಕಿನ ಮತ್ತು ಆಸುಪಾಸಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಚಂದ್ರಯಾನ 3- ಆದಿತ್ಯ ಎಲ್-1 ವಿಕ್ರಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ.
ಕೃಷ್ಣಮೋಹನ್ ಶಾನ್ಭಾಗ್ ರವರು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾಥಿಯಾಗಿದ್ದು ಚಂದ್ರಯಾನ-3 ರ ಯಶಸ್ವಿ ಉಡ್ಡಯಾನದಲ್ಲಿ , ಸೂರ್ಯಯಾನದ ಯಶಸ್ವಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ರಾವ್ , ಕಾರ್ಯದರ್ಶಿ ಡಾ. ಮನಮೋಹನ ಎಂ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಗೋಪಾಲಕೃಷ್ಣ ಭಟ್ , ಪ್ರಾಂಶುಪಾಲ ಮಹೇಶ ನಿಟಿಲಾಪುರ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844665385 ಅಥವಾ 08251 237455 ಸಂಪರ್ಕಿಸಬಹುದಾಗಿದೆ.


























