ಮಂಗಳೂರು : ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಸ್ತಫಾ ಮತ್ತು ಶಂಶುದ್ದೀನ್ ಬಂಧಿತ ಆರೋಪಿಗಳು.
ಬಂಧಿತ ಮುಸ್ತಾಫಾ ಕೇರಳದ ಗುಡ್ಡೆಕೇರಿ ಹೌಸ್ ನಿವಾಸಿಯಾಗಿದ್ದು, ಶಂಶುದ್ದೀನ್ ಕೇರಳದ ಮಜಲುಗುಡ್ಡ ಹೌಸ್ ನಿವಾಸಿಯಾಗಿದ್ದಾನೆ. ಇವರ ಬಳಿ ಇದ್ದ 75 ಸಾವಿರ ಮೌಲ್ಯದ 15 ಗ್ರಾಂ ಡ್ರಗ್ಸ್ ಮತ್ತು ಡಿಜಿಟಲ್ ತೂಕಮಾಪನವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

























