ಪುತ್ತೂರು : ತಲವಾರು ಹಿಡಿದುಕೊಂಡ ಯುವಕರ ತಂಡವೊಂದು ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಿದ ಬಗ್ಗೆ ವರದಿಯಾಗಿದೆ.
ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟಪದ ಬಳಿ ಇರುವ ಅರುಣ್ ಕುಮಾರ್ ಪುತ್ತಿಲ ರವರ ಕಚೇರಿಗೆ ಇಂದು ಮಧ್ಯಾಹ್ನ ವೇಳೆ ಯುವಕರ ತಂಡವೊಂದು ನುಗ್ಗಿದೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯುವಕರನ್ನು ವಶಕ್ಕೆ ಪಡೆದಿದ್ದಾರೆನ್ನಲಾಗುತ್ತಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..

























