ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಡುಪಿ ಮಹತ್ಮಾಗಾಂಧಿ ಜಿಲ್ಲಾ ಮೈದಾನ, ಅಜ್ಜರಕಾಡು ಇಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ನವೆಂಬರ್ 2 ಮತ್ತು 3ರಂದು ನಡೆಯಿತು.

ಈ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಚಿಂತನಾ.ಸಿ ( ಗಿರೀಶ್‍ರಾಜ್ ಮತ್ತು ಡಾ.ಧನೇಶ್ವರಿ ದಂಪತಿ ಪುತ್ರಿ) – 80 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿರುತ್ತಾಳೆ.
14ರ ವಯೋಮಾನದ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ನಿಧಿಶ್ರೀ ಕೆ ( ದೇರಣ್ಣ ಗೌಡ ಮತ್ತು ಹೇಮಲತ ದಂಪತಿ ಪುತ್ರಿ) 80 ಮೀಟರ್ ಹರ್ಡಲ್ಸ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾಳೆ.
ಪ್ರಥಮ ಸ್ಥಾನ ಪಡೆದ ಚಿಂತನಾ.ಸಿ, ಉತ್ತರ ಪ್ರದೇಶದ ಲಕ್ನೋದಲ್ಲಿ ಡಿಸೆಂಬರ್ 16 ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

























