ಪುತ್ತೂರು : ಕೇವಲ ಒಂದು ಕೇಸ್ ಇರುವ ಪುತ್ತೂರು ಬಜರಂಗದಳದ ನಾಲ್ಕು ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ ನೀಡಿದ ಪೊಲೀಸ್ ಇಲಾಖೆಯ ನಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ರವರು ಖಂಡಿಸಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಗಡಿಪಾರು ನೋಟೀಸ್ ನೀಡಿರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡ ಅವರು., ಸಂಘಟನೆಯ ಕಾರ್ಯಕರ್ತರ ಮೇಲೆ ಈ ತರಹ ದಬ್ಬಾಳಿಕೆ ನಡೆಸಿದರೆ ನಾವೇ ಮುಂದೇ ನಿಂತು ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ನಿನ್ನೆ ಎಸಿ ಅವರಲ್ಲಿಯೂ ಮಾತನಾಡಿದ ಸಂಸದರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.


























