ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್, ಲಾರಿ, ಆಪೆ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಏಳ್ಮುಡಿ ಪೈ ಶೋರೂಮ್ ಬಳಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಚಲಿಸುತ್ತಿದ್ದ ವೇಳೆ ಹಠಾತ್ ಬ್ರೇಕ್ ಹಾಕಿದ್ದು, ಈ ವೇಳೆ ಹಿಂಬದಿಯಲ್ಲಿದ್ದ ಲಾರಿಗೆ ಡಿಕ್ಕಿಯಾಗಿದೆನ್ನಲಾಗಿದೆ.

ಘಟನೆಯಲ್ಲಿ ಪೈ ಮಳಿಗೆ ಬಳಿ ನಿಲ್ಲಿಸಿದ್ದ ಆಪೆ ವಾಹನಕ್ಕೂ ಹಾನಿಯಾಗಿದೆ ಎಂದು ವರದಿಯಾಗಿದೆ.


























