ವಂಚನೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ವಿರುದ್ಧ ಕೇಸ್ ದಾಖಲಾಗಿದೆ.
ಶ್ರೀಶಾಂತ್ ವಿರುದ್ಧ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಾಲುದಾರಿಕೆ ನೀಡುವುದಾಗಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ..?
ಕಣ್ಣೂರು ಮೂಲದ ಸರೀಗ್ ಬಲಗೋಪಾಲನ್ ಅನ್ನೋರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸರೀಗ್ ನೀಡಿದ ದೂರಿನಲ್ಲಿ, ಉಡುಪಿ ಮೂಲದ ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿನ್ನಿ ಅನ್ನೋರು ನನ್ನಿಂದ 18.70 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಕೊಲ್ಲೂರು ಮೂಲದ ರಾಜೀವ್ ಕುಮಾರ್ ತಮ್ಮ ಹೆಸರಲ್ಲಿ ಬಿಲ್ಡಿಂಗ್ ನಿರ್ಮಾಣ ಮಾಡುವುದಾಗಿ ಹಣ ಪಡೆದಿದ್ದರು.
ಉಡುಪಿ ಮೂಲದ ಇಬ್ಬರು ವ್ಯಕ್ತಿಗಳು ಮತ್ತು ಶ್ರೀಶಾಂತ್ ಆರಂಭಿಸಲಿರುವ ‘ಸ್ಪೋರ್ಟ್ಸ್ ಅಕಾಡೆಮಿ’ಯಲ್ಲಿ ಪಾಲುದಾರರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇವರು ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ ಮಾಡಲಿಲ್ಲ, ನನ್ನ ಹಣವನ್ನೂ ವಾಪಸ್ ನೀಡಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕಣ್ಣೂರಿನ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣ ವಿಚಾರಣೆ ನಡೆಸಿ, ತನಿಖೆ ನಡೆಸಲು ಆದೇಶ ನೀಡಿದೆ. ಐಪಿಸಿ ಸೆಕ್ಷನ್ 420 ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚನೆ ನೀಡಿದೆ.

























