ಇನ್ಮುಂದೆ ಅರಣ್ಯದಲ್ಲಿ ಮರಗಳ್ಳರ ಆಟ ನಡೆಯೋದಿಲ್ಲ. ಅರಣ್ಯದ ಅಂತರಾಳದ ರಹಸ್ಯ, ಪ್ರಾಣಿಗಳ ಲೆಕ್ಕದ ಜೊತೆಗೆ ಹೆಜ್ಜೆ ಗುರುತನ್ನು ಕ್ಷಣಮಾತ್ರದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಮಾಡಲಾಗುತ್ತದೆ. ಅಷ್ಟಕ್ಕೂ ಏನಿದು ಕ್ಯಾಮರಾ ಟ್ರ್ಯಾಪಿಂಗ್.!?
ಬನ್ನೇರುಘಟ್ಟ ಅರಣ್ಯ ಪ್ರದೇಶ ಕ್ಯಾಮರಾ ಟ್ರ್ಯಾಪಿಂಗ್ಗೆ ಒಳಪಡಲಿದೆ. ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸುವ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಕೇಳಿ ಅಚ್ಚರಿ ಚಕಿತರಾಗಿದ್ದಾರೆ.
![](https://zoomintv.online/wp-content/uploads/2023/11/WhatsApp-Image-2023-11-30-at-11.25.14-AM.jpeg)
ಇತ್ತೀಚಿಗಂತೂ ನಗರದಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷವಾಗ್ತಿದೆ. ಇದು ನಗರದ ಜನರಲ್ಲಿ ಆತಂಕ ಮೂಡಿಸ್ತಿದೆ. ಈ ನಡುವೆ ಕಾಡಿನಲ್ಲಿ ಮರಗಳ್ಳರ ಹಾವಳಿಯು ಹೆಚ್ಚಾಗ್ತಿದೆ. ಅಲ್ಲದೇ ಅರಣ್ಯದಲ್ಲಿ ಪ್ರಾಣಿಗಳು ಎಷ್ಟಿದೆ ಅನ್ನೋದರ ಲೆಕ್ಕವೇ ಇಲ್ಲದಂತ್ತಾಗಿದೆ. ಹೀಗೆ ಕಾನನದಲ್ಲಿ ಅಡಗಿರೋ ಸಾಕಷ್ಟು ಸಾಲು ಸಾಲು ಸಮಸ್ಯೆಗೆ ಇನ್ಮುಂದೆ ಕ್ಯಾಮೆರಾ ಟ್ರ್ಯಾಪಿಂಗ್ ಫುಲಿಸ್ಟಾಪ್ ಇಡಲಿದೆ.
ಕ್ಯಾಮೆರಾ ಟ್ರ್ಯಾಪಿಂಗ್ ಹುಲಿ, ಚಿರತೆಗಳ ಗುರುತನ್ನು ಪತ್ತೆ ಮಾಡಲು ಇದನ್ನು ಬಳಸುತ್ತಿದ್ದೆವು. ಇದೇ ತಂತ್ರಜ್ಞಾನವನ್ನು ಕಾಡಿನಲ್ಲಿ ನಡೆಯುವ ಕಳ್ಳಬೇಟೆ, ಕಳ್ಳಸಾಗಣೆ ಸೇರಿದಂತೆ ಅರಣ್ಯದ ನೈಸರ್ಗಿಕತೆ ಕದಿಯುವವರನ್ನು ಇದರ ಮೂಲಕ ಪತ್ತೆ ಮಾಡಬಹುದು.
ಡಾ.ಸಂಜಯ್ ಗುಬ್ಬಿ, ವನ್ಯ ಜೀವಿ ವಿಜ್ಞಾನಿ
ಕಳೆದ ಮೂರು ನಾಲ್ಕು ದಿನಗಳಿಂದ ಜೈನ್ ಕಾಲೇಜು ಆಯೋಜನೆ ಮಾಡಿದ್ದ ಈ ವರ್ಕ್ ಶಾಪ್ನಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನ ನೀಡಲಾಯ್ತು. ಇವು ಕಾಡು ಪ್ರಾಣಿಗಳ ಚಲನವಲನ ಗುರುತಿಸಿ ಅವುಗಳ ಚಿತ್ರ ಸೆರೆ ಹಿಡಿಯಲು ಅನುಕೂಲವಾಗಲಿದೆ. ಅಲ್ಲದೇ ಚಿರತೆ ಪತ್ತೆ ಹಚ್ಚುವಿಕೆ, ಮರಗಳ್ಳರ ಎಂಟ್ರಿ ಸೇರಿದಂತೆ ಕಾನನದಲ್ಲಿ ನಡೆಯೋ ಅನೇಕ ಚಲನವಲನಗಳನ್ನ ಸೆರೆ ಹಿಡಿಯೋದರ ಜೊತೆಗೆ ಕೂಡಲೇ ಸಿಗ್ನಲ್ ಕೂಡ ನೀಡುತ್ತೆ.
ಈ ಕ್ಯಾಮೆರಾ ಟ್ರ್ಯಾಪಿಂಗ್ ವರ್ಕ್ ಶಾಪ್ನಲ್ಲಿ ಟೀಚರ್ಸ್, ಸ್ಟುಡೆಂಟ್ಸ್ ಸೇರಿದಂತೆ ಜೈನ್ ಕಾಲೇಜಿನ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕಾಡಿನಲ್ಲಿ ಮರಗಳ್ಳರ ಹಾವಳಿ ಹೆಚ್ಚುತ್ತಿರುವ ಹೊತ್ತಲ್ಲಿ, ಚಿರತೆಯ ಕಾಟ ಭಯ ಬೀಳಿಸಿರುವ ಸಮಯದಲ್ಲಿ ಈ ರೀತಿಯ ವರ್ಕ್ ಶಾಪ್ಗಳು ಯುವಜನರಲ್ಲಿ ಪರಿಸರದ ಬಗೆಗಿನ ಕಾಳಜಿ ಹೆಚ್ಚು ಮಾಡುವುದರಲ್ಲಿ ಎರಡು ಮಾತಿಲ್ಲ.