ಬೆಂಗಳೂರು : ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು ಮಹಿಳೆಗೆ ವಂಚಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಮಹಿಳೆ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ಹಣ ಪಡೆದು ಸಿನಿಮೀಯ ಶೈಲಿಯಲ್ಲಿ ವಂಚನೆ ನಡೆದಿದೆ.
ಫಾತಿಮಾ ಎಂಬಾಕೆ ವಂಚನೆಗೆ ಒಳಗಾಗಿರುವ ಮಹಿಳೆ. ಈಕೆಗೆ ಹಜರತ್ ನೂರ್ ಮೊಹಮ್ಮದ್ ಎಂಬಾತ ವಂಚಿಸಿದ್ದಾನೆ.
ಮಹಿಳೆ ಫಾತಿಮಾರನ್ನ ಪತಿ ಬಿಟ್ಟೋಗಿದ್ದು, ಈಕೆಯ ಮೂರು ವರ್ಷದ ಮಗುವಿನ ಕೈಗೆ ಗಾಯವೊಂದು ಆಗಿತ್ತು. ಹೀಗಾಗಿ ಪಕ್ಕದ ಮನೆಯರ ಮಾತು ಕೇಳಿ ನಾಗಮಂಗಲದಲ್ಲಿರೋ ಹಜರತ್ ನೂರ್ ಸಂಪರ್ಕ ಮಾಡಿ ಔಷಧಿ ತೆಗೆದುಕೊಂಡಿದ್ದಳು.
ಕಾಕತಾಳಿಯ ಎಂಬಂತೆ ಮಗುವಿಗೆ ಕೈ ಒಂದು ವಾರದಲ್ಲಿ ಸರಿಹೋಗಿತ್ತು. ಇದರಿಂದ ಹಜರತ್ ನನ್ನ ಸಂಪೂರ್ಣ ನಂಬಿದ್ದ ಫಾತಿಮಾ ಪತಿಯನ್ನ ತನ್ನ ಜೊತೆಗಿರುವಂತೆ ಮಾಡಿ ಎಂದು ಆತನ ಬಳಿ ಕೇಳಿಕೊಂಡಿದ್ದಳು.
ಪ್ರಾರಂಭದಲ್ಲಿ ಗಂಡ ನಿನ್ನ ಜೊತೆಗೆ ಇರುವಂತೆ ಮಾಡ್ತೀನಿ ಎಂದು ಒಂದು ಲಕ್ಷ ಹಣ ಪಡೆದಿದ್ದ ಹಜರತ್ ನೂರ್, ಆ ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಏಳು ಲಕ್ಷ ಪಡೆದಿದ್ದಳು. ಆದರೆ ಪ್ರತಿ ತಿಂಗಳು ಇಎಮ್ಐ ಮೂಲಕ ಹಣ ಕಡ್ತೀನಿ ಅಂತ ಹೇಳಿ ಹಣ ಕೈಗೆ ಬಂದ ತಕ್ಷಣ ಎಸ್ಕೇಪ್ ಆಗಿದ್ದಾನೆ.
ಫಾತಿಮಾ ನೀರಾವರಿ ಇಲಾಖೆಯಲ್ಲಿ ಎಫ್ಡಿಎ ಅಧಿಕಾರಿಯಾಗಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ಕೇಸ್‌ನಲ್ಲಿ ಶಿರಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಬಾಡಿ ವಾರೆಂಟ್ ಪಡೆಯಲು ವಿಧಾನಸೌಧ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.