ಶಿವಮೊಗ್ಗ : ಸಾಮಾನ್ಯವಾಗಿ ತೋಟ, ಹೊಲಗಳಲ್ಲಿ ಪ್ರಾಣಿ, ಪಕ್ಷಿಗಳ ಹಾವಳಿ ತಪ್ಪಿಸಲು ಬೆದರು ಗೊಂಬೆಗಳನ್ನು ಅಥವಾ ದೃಷ್ಟಿ ಆಗಬಾರದೆಂದು ದೇವರ ಹರಕೆ ಗೊಂಬೆಗಳನ್ನು ಇಡುತ್ತಾರೆ. ಆದರೆ ಇಲ್ಲೊಬ್ಬ ರೈತ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ವಿಚಿತ್ರ ಪ್ರಯೋಗ ಮಾಡಿದ್ದಾನೆ. ಅದೇನು ಗೊತ್ತಾ.!??
ತೋಟಕ್ಕೆ ದೃಷ್ಟಿ ಬೀಳಬಾರದು ಎಂದು ರೈತನೋರ್ವ ಸಿನಿಮಾ ನಟಿಯರ ಫೋಟೋವನ್ನು ನೇತುಹಾಕಿದ್ದಾನೆ. ಹೊಸನಗರದ ರಿಪ್ಪನ್ ಪೇಟೆ ಬೆಳೆಯ ಮಳವಳ್ಳಿ ಗ್ರಾಮದ ರೈತ ಆ ಮೂಲಕ ವಿಭಿನ್ನ ಹಾಗೂ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾನೆ.
ಹೌದು.. ಎರಡು ಎಕರೆ ಬಾಳೆ ತೋಟಕ್ಕೆ ದೃಷ್ಟಿ ಆಗಬಾರದೆಂದು ರೈತ ರಂಗಸ್ವಾಮಿ ಬೆದುರುಗೊಂಬೆ ಬದಲಾಗಿ ಹಾಟ್ ನಟಿಯರ ಫೋಟೋ ನೇತು ಹಾಕಿದ್ದಾನೆ.
ತೋಟದ ಸುತ್ತಲೂ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋ ಇಟ್ಟಿದ್ದಾನೆ.
ಮಳವಳ್ಳಿ ಗ್ರಾಮದ ರಂಗಸ್ವಾಮಿ ಹಲವು ಬಾರಿ ದೃಷ್ಟಿಗೊಂಬೆಗಳನ್ನ ಇಟ್ಟು ಯಾವುದೇ ಪ್ರಯೋಜನವಾಗದ ನಂತರ ನಟಿಯರ ಫೋಟೋವನ್ನು ದೃಷ್ಟಿ ಗೊಂಬೆ ಜಾಗದಲ್ಲಿ ಇಟ್ಟಿದ್ದಾನೆ. ಆ ಮೂಲಕ ತನ್ನ ವಿಭಿನ್ನ ಪ್ರಯೋಗದಿಂದ ಸಕ್ಸಸ್ ಆಗಿದ್ದಾನೆ.
ರೈತ ರಂಗಸ್ವಾಮಿ ಈ ಬಗ್ಗೆ ಮಾತನಾಡಿದ್ದು, ನಟಿಯರ ಫೋಟೋವನ್ನು ಜನರು ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆ ಫೋಟೋವನ್ನು ನೋಡಿ ಕೇಕೆಯನ್ನು ಹಾಕುತ್ತಾರೆ ಎನ್ನುತ್ತಾರೆ.
ಒಟ್ಟಿನಲ್ಲಿ ಮೊಳವಳ್ಳಿ ಗ್ರಾಮದ ರೈತ ರಂಗಸ್ವಾಮಿ ದೃಷ್ಟಿಯ ತಲೆನೋವನ್ನು ಭಿನ್ನ ಪ್ರಯತ್ನದಿಂದ ಬೇರೆಡೆಗೆ ಸೆಳೆಯಲು ಹೊಸ ಪ್ರಯೋಗ ಮಾಡಿದ್ದಾನೆ. ರಂಗಸ್ವಾಮಿಯ ಈ ಪ್ರಯತ್ನವನ್ನ ನೋಡಿ ದಾರಿಹೋಕರು, ಪ್ರಯಾಣಿಕರು ಮನದಲ್ಲೇ ನಕ್ಕು ಮುಂದೆ ಸಾಗತ್ತಿದ್ದಾರೆ..