ಪುತ್ತೂರು : ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಡಿ.24-25 ರಂದು ಪ್ರಪ್ರಥಮ ಬಾರಿಗೆ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಕಾರ್ಯಾಲಯ ಉದ್ಘಾಟನೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಬಾಕಿಮಾರು ಗದ್ದೆಯಲ್ಲಿ ಡಿ.2ರಂದು ಬೆಳಿಗ್ಗೆ ನಡೆಯಿತು.
ಮಾಣಿಲ ಶ್ರೀ ಮೋಹನದಾಸ ಸ್ವಾಮಿಜಿ ಕಾರ್ಯಾಲಯ ಉದ್ಘಾಟಿಸಿ, ಶುಭಹಾರೈಸಿದರು.
ಈ ಸಂದರ್ಭ ಪುತ್ತಿಲ ಪರಿವಾರದ ವೆಬ್ ಸೈಟ್ ಗೆ ಹರಿಪ್ರಸಾದ್ ಹೊಟೇಲ್ ಮಾಲಕ ಹರಿನಾರಾಯಣ ಹೊಳ್ಳ ಚಾಲನೆ ನೀಡಿದರು.
ಅರುಣ್ ಕುಮಾರ್ ಪುತ್ತಿಲ, ಅನಿವಾಸಿ ಭಾರತೀಯ ಉದ್ಯಮಿ , ರಾಜ್ಯೋತ್ಸವ ಪುರಸ್ಕೃತ ರವಿ ಶೆಟ್ಟಿ ಮೂಡಂಬೈಲು, ಜಯಂತ ನಡುಬೈಲು, ಜಯಕುಮಾರ್ ನಾಯರ್, ಸ್ನೇಹ ಸಿಲ್ಕ್ ನ ಮಾಲಕರಾದ ಸತೀಶ್ ಕುಮಾರ್, ಪದ್ಮಶ್ರೀ ಮೆಡಿಕಲ್ ಮಾಲಕರಾದ ತಾರಾನಾಥ ರೈ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಸ್ವಾಗತ ಸಮಿತಿ ಅಧ್ಯಕ್ಷರು ಕಿರಣ್ ಗೌಡ, ಉಪಾಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಪ್ರಸಾದ್ ಶೆಟ್ಟಿ,ಸ್ವಾಗತ ಸಮಿತಿ ಸಂಚಾಲಕರಾದ ಗಣೇಶ್ ಭಟ್ ಮಕರಂದ, ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಿಕಾ ಪ್ರಸಾದ್, ಜಯಲಕ್ಷ್ಮೀ, ಅಶ್ವಿನಿ ಸಂಪ್ಯ, ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ರವಿ ರೈ ಕೆದಂಬಾಡಿ ಮಠ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ಗೋಪಾಲಕೃಷ್ಣ ಭಟ್ , ಮಹೇಂದ್ರ ವರ್ಮ, ಲಕ್ಷ್ಮಣ ಬೈಲಾಡಿ, ಪ್ರಶಾಂತ್ ನೆಕ್ಕಿಲಾಡಿ , ಕಿಶೋರ್ ಜೋಗಿ, ಮಹೇಂದ್ರ ವರ್ಮ, ಅರುಣ್ ಭಟ್, ರಾಜೇಶ್ ಭಟ್ ಕುಳ, ರವಿಕೃಷ್ಣ ನಗರ, ಗೋಕುಲ್ ದಾಸ್ ಪ್ರಗತಿ, ಭೀಮಯ್ಯ ಭಟ್, ಪ್ರವೀಣ್ ಭಂಡಾರಿ, ಅನಿಲ್ ಮುಂಡೂರು, ಅಶೋಕ್ ಪುತ್ತಿಲ,ಪುರುಷೋತ್ತಮ ಕೋಲ್ಪೆ , ಜಯಪ್ರಕಾಶ್ , ರತ್ನಾಕರ್ ನಾಯಕ್ ಸಹಿತ ನೂರಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತಿಲ ಪರಿವಾರ ಟ್ರಸ್ಟ್ ನ ಅಡಿಯಲ್ಲಿ PuthilaParivara.Org ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ವಾಲಿಂಟಿಯರ್ ಹಾಗೂ ಮೆಂಬರ್ ಶಿಪ್ ಎಂಬ ಎರಡು ವಿಭಾಗವಿದ್ದು, ಮೆಂಬರ್ ಶಿಪ್ ಆದವರಿಗೆ ಕಾರ್ಯಕ್ರಮಗಳ ಅಪ್ಡೇಟ್ ಸಂದೇಶ ಮೊಬೈಲ್ ಗೆ ಹೋಗಲಿದೆ. ಇದಕ್ಕೆ 10 ರೂ. ಸದಸ್ಯತನ ಶುಲ್ಕವಿದೆ.
ವಾಲಿಂಟಿಯರ್ ಗೆ ಉಚಿತ ಸದಸ್ಯತ್ವ ಇರಲಿದೆ. ಸದಸ್ಯತನ ಹಾಗೂ ವಾಲಿಂಟಿಯರ್ ಆಗುವವರಿಗೆ ಐಡಿ ಕಾರ್ಡ್ ಲಭಿಸಲಿದೆ.
ಡೋನೆಶನ್ ಮಾಡುವವರಿಗೂ ಅವಕಾಶವಿದೆ. ರಕ್ತದಾನ ಮಾಡುವವರಿಗೆ ನೊಂದಣಿ ಹಾಗೂ ಸರ್ಟಿಫಿಕೇಟ್ ವ್ಯವಸ್ಥೆಯಿದೆ.