ಉಪ್ಪಿನಂಗಡಿ : ಪ್ರತಿಭಾವಂತ ಕ್ರಿಕೆಟ್ ಆಟಗಾರನಾಗಿದ್ದ 34 ನೆಕ್ಕಿಲಾಡಿ ನಿವಾಸಿ ಗಣೇಶ (ಪುಟ್ಟ) (47) ಡಿ.3 ರಂದು ನಿಧನರಾದರು.

ಈ ಬಗ್ಗೆ ಗಣೇಶ್ ರವರ ಸಹೋದರ ಜೀವನ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೀವನ್ ರವರ ಸಹೋದರ ಗಣೇಶ್ ರವರು ವಿಪರೀತ ಮಧ್ಯಸೇವನೆ ಚಟ ಹೊಂದಿದ್ದು, ರಾತ್ರಿ ಎಲ್ಲೆಂದರಲ್ಲಿ ಮಲಗುತ್ತಿದ್ದು, ಹೆಚ್ಚಾಗಿ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಮಲಗುತ್ತಿದ್ದರು. ನ.3 ರಂದು ಬೆಳಗ್ಗೆ ಪರಿಚಯದವರು ಕರೆ ಮಾಡಿ ನಿನ್ನ ತಮ್ಮ ಗಣೇಶನು ಬಸ್ಸು ನಿಲ್ದಾಣದಲ್ಲಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿರುವುದಾಗಿ ತಿಳಿಸಿದ ಮೇರೆಗೆ ಕೂಡಲೇ ಅಲ್ಲಿಗೆ ಹೋದಾಗ ಪ್ರಜ್ಞೆಯಿಲ್ಲದೇ ಬಿದ್ದಿದ್ದ ಗಣೇಶ ರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಗಣೇಶ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಗಣೇಶ್ ದಿನಂಪ್ರತಿ ವಿಪರೀತ ಮಧ್ಯ ಸೇವನೆ ಮಾಡಿ ತೀವ್ರ ಕಾಯಿಲೆ ಪೀಡಿತನಾಗಿ ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರುವುದೇ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಯಾ ಕಾರಣ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಗಣೇಶ್ ರವರು ಕ್ರಿಕೆಟ್ ಪಂದ್ಯಾಟಗಳ ಆಯೋಜನೆ, ಅನೌನ್ಸ್ ಮೆಂಟ್, ಕಾರ್ಯಕ್ರಮ ನಿರೂಪಣೆ ಹೀಗೆ ಹಲವು ಕಾರ್ಯಗಳಲ್ಲಿ ಉತ್ತಮ ಪ್ರತಿಭೆಯನ್ನು ಹೊಂದಿದ್ದರು.



























