ಈಶ್ವರಮಂಗಲ : ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಗಾಳಿಮುಖದಲ್ಲಿ ನಡೆದಿದ್ದು, ಮೃತರನ್ನು ಕುಂಞರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ.
ಕೃಷಿಕರಾಗಿದ್ದ ಕುಂಞರಾಮ ಮಣಿಯಾಣಿ ಅವರು ಮುಳ್ಳೇರಿಯಾದ ಕೋಳಿಕಲ್ ನಿವಾಸಿ.
ಗಾಳಿಮುಖಕ್ಕೆ ಬಂದಿದ್ದ ಅವರು, ಬಸ್ಸಿನಿಂದ ಇಳಿದು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ದುರ್ಘಟನೆ ನಡೆದಿದೆ
ಹಿಂಬದಿ ಬಾಗಿಲಿನಿಂದ ಇಳಿದಿದ್ದ ಅವರು ಇನ್ನೊಂದು ಬದಿಗೆ ದಾಟುವವರಿದ್ದರು. ಅಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಅವರ ಎದೆಯ ಭಾಗದಿಂದ ಬಸ್ ಹರಿದಿದೆ.
ಮೃತರು ಪತ್ನಿ ಮತ್ತು 2 ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಘಟನೆಯಿಂದಾಗಿ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

























