ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ ತುಂಬಾ ಟ್ರೆಂಡಿಂಗ್ ಅಲ್ಲಿದೆ. ಬಹುತೇಕ ವಿವಾಹವಾಗುವಂತಹ ಎಲ್ಲಾ ಜೋಡಿಗಳು ವಿವಿಧ ಥೀಮ್ ಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಬೇಕೆಂದು ಬಯಸುತ್ತಾರೆ. ಮತ್ತು ಈ ಕ್ಷಣವನ್ನು ಸ್ಮರಣೀಯವಾಗಿರಿಸಲು ಕೆಲವೊಬ್ಬರು ವಿದೇಶಕ್ಕೆ ಹೋಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡರೆ, ಕೆಲವೊಬ್ಬರು ಬೀಚ್, ನಿಸರ್ಗದ ಮಡಿಲಲ್ಲಿ, ಸ್ನೋ ಫಾಲ್ ಇತ್ಯಾದಿ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ಅದರಲ್ಲೂ ಇನ್ನೂ ಕೆಲವೊಬ್ಬರೂ ಸಭ್ಯತೆಯ ಎಲ್ಲೆ ಮೀರಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಈ ಹಿಂದೆ ಕೇರಳದ ಜೋಡಿಯೊಂದು ಅಸಭ್ಯ ರೀತಿಯಲ್ಲಿ ಪೋಸ್ಟ್ ವೆಡ್ಡಿಂಗ್ ಶೂಟ್ ಮಾಡಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಆದರೆ ಇಲ್ಲೊಂದು ಜೋಡಿ ನಮ್ಮ ಸಂಸ್ಕೃತಿ, ಸಂಪ್ರದಾಯದಕ್ಕೆ ಸರಿ ಹೊಂದುವಂತೆ ಅದ್ಭುತವಾದ ಥೀಮ್ ಇಟ್ಟುಕೊಂಡು ಪ್ರೀ ವೆಡಿಂಗ್ ಶೂಟ್ ಮಾಡಿದ್ದಾರೆ.
ಈ ವೀಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಶಿವಾರ್ಚಕ ಮಧು ದೀಕ್ಷಿತ್ ದಂಪತಿ ಈ ಅದ್ಭುತ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು, ಈ ವೀಡಿಯೋವನ್ನು ನಿತ್ಯಾನಂದ ಎಸ್.ಬಿ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ʼಇದ್ದಪ್ಪಾ ಪ್ರೀ ವೆಡಿಂಗ್ ಶೂಟ್ ಅಂದ್ರೆ!!!ʼ ಎಂಬ ಶೀರ್ಷಿಕೆಯನ್ನು ಕೂಡಾ ಬರೆದುಕೊಂಡಿದ್ದಾರೆ.
ʼಓಂʼ ಚಿತ್ರ ಬ್ರಹ್ಮಾನಂದ ಓಂಕಾರʼ ಹಾಡಿಗೆ ಹಿಂದೂ ಸಂಸ್ಕೃತಿಯಂತೆ ವೀಡಿಯೋ ಶೂಟ್ ಮಾಡಿಸಿದ್ದು, ನವ ಜೋಡಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಸುಂದರವಾದ ದೃಶ್ಯಾವಳಿಗಳನ್ನು ವೀಡಿಯೋದಲ್ಲಿ ಕಾಣಬಹುದು.
ಈ ವೀಡಿಯೋವನ್ನು ದೇವಾಲಯ ಹಾಗೂ ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಶೂಟ್ ಮಾಡಲಾಗಿದ್ದು, ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ವೆಸ್ಟರ್ನ್ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವವರ ಮಧ್ಯೆ ಈ ಜೋಡಿಯ ಅರ್ಥಪೂರ್ಣವಾದ ಪ್ರೀ ವೆಡ್ಡಿಂಗ್ ಶೂಟ್ಗೆ ಭಾರೀ ಮೆಚ್ಚುಗೆ ಸಿಕ್ಕಿದೆ.
ಫೇಸ್ಬುಕ್ ಅಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ 497 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಿಜವಾಗಿಯೂ ಇದು ತುಂಬಾ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೊಂದು ಅದ್ಭುತ ಕಾನ್ಸೆಪ್ಟ್. ಈ ತರಹದ ಒಂದು ಪ್ರೀ ವೆಡಿಂಗ್ ಶೂಟ್ ನಾನು ಈವರೆಗೆ ನೋಡೆ ಇಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಲ್ಲಿಯೂ ಸಭ್ಯತೆ ಮೀರದೆ ಮಾಡಿರುವ ಈ ವಿಡಿಯೋ ಶೂಟ್ ತುಂಬಾ ಚೆನ್ನಾಗಿದೆʼ ಎಂದು ಹೇಳಿದ್ದಾರೆ. ಇನ್ನು ಹಲವರೂ ಈ ಅದ್ಭುತವಾದ ಪ್ರೀ ವೆಡ್ಡಿಂಗ್ ಶೂಟ್ ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.


























