ಮಲಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗಿದ್ದಾರೆ. 24 ವರ್ಷದ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಕ್ಷ್ಮಿಕಾ ಸಂಜೀವನ್ ಇನ್ಸ್ಟಾಗ್ರಾಂನಲ್ಲಿ ಕೊನೆಯದಾಗಿ ನ.2 ರಂದು ಪೋಸ್ಟ್ ಹಂಚಿಕೊಂಡಿದ್ದರು. ಸೂರ್ಯಾಸ್ತದ ಸುಂದರವಾದ ಚಿತ್ರವನ್ನು ಶೇರ್ ಮಾಡಿದ್ದರು.
ಲಕ್ಷ್ಮಿಕಾ ಸಂಜೀವನ್ ಅವರು ಪಂಚವರ್ಣತಥಾ, ಸೌದಿ ವೆಲ್ಲಕ್ಕ, ಪೂಜ್ಯಮ್ಮ, ಉಯರೆ, ಒರು ಕುಟ್ಟುನಾಡನ್ ಬ್ಲಾಗ್, ನಿತ್ಯಹರಿತ ನಾಯಗನ್ ಹೀಗೆ ಅನೇಕ ಸಿನಿಮಾಗಳಲ್ಲಿ ಈ ನಟಿಸಿದ್ದಾರೆ.


























