ಪುತ್ತೂರು : ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣದ ಜೊತೆ, ರಾಜ್ಯ ಮಟ್ಟದಲ್ಲಿ ಗ್ರಾಮೀಣ ಭಾಗದ ಹೆಸರನ್ನು ತರುವಲ್ಲಿ ಗುರುಪ್ರಿಯಾ ಕಾಮತ್ ಇವರು ಪಟ್ಟ ಶ್ರಮ ಬಹಳಷ್ಟು. ನಮ್ಮೂರಿನ ಹೆಮ್ಮೆಯ ಪ್ರತಿಭೆ ಒಂದು ಕಲಾಕೇಂದ್ರ ಸ್ಥಾಪಿಸಿ ಪುರುಷರಕಟ್ಟೆಯಿಂದ – ಬಿ. ಸಿ ರೋಡಿನವರೆಗೆ ತನ್ನ ಶಾಖೆ ವಿಸ್ತರಿಸಿ, ಸಂಗೀತ ಕ್ಷೇತ್ರದಲ್ಲಿ ಶಕ್ತಿಯನ್ನು ತುಂಬುವಂತಹ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನೂತನ ಶಾಖೆ ಪ್ರಾರಂಭಿಸಿರುವುದು ಸಂತಸದ ವಿಚಾರವೆಂದು ಕಲಾಕೇಂದ್ರದ ಪ್ರೋತ್ಸಾಹಕರೂ, ಪುತ್ತಿಲ ಪರಿವಾರದ ಸಂಚಾಲಕರು ಆಗಿರುವ ಅರುಣ್ ಕುಮಾರ್ ಪುತ್ತಿಲ ಶುಭ ನುಡಿಗಳನ್ನಾಡಿದರು.

ಅವರು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆ (ರಿ), ಇದರ ಸುಗಮ ಸಂಗೀತ ತರಗತಿಯ ನೂತನ ಶಾಖೆಯನ್ನು ಪುತ್ತೂರು ಬೊಳುವಾರಿನ ಶ್ರೀ ರಕ್ಷಾ ಕಲಾ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀನಿವಾಸ್ ಹೆಚ್, ಸಂಚಾಲಕರು ಶ್ರೀ ರಕ್ಷಾ ಕೇಂದ್ರ ಇವರು ಮಾತನಾಡಿ, ಒಂದೊಳ್ಳೆ ಗುರುಗಳು ನಮ್ಮ ತರಬೇತಿ ಕೇಂದ್ರಕ್ಕೆ ದೊರಕಿದ್ದು – ಪುತ್ತೂರಿನ ಸಂಗೀತಾಸಕ್ತ ಮಕ್ಕಳಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದ0ತಾಗಿದೆ. ಒಳ್ಳೆಯ ವಾತಾವರಣದಲ್ಲಿ ಮಕ್ಕಳು ಸಂಗೀತಭ್ಯಾಸ ಮಾಡಲು ಬೇಕಾದ ಎಲ್ಲಾ ಸೌಕರ್ಯಗಳು ಕಲಾ ಕೇಂದ್ರದಲ್ಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಕ್ಷಾ ತರಬೇತಿ ಕೇಂದ್ರದ ಅಧ್ಯಕ್ಷರಾದ ಡಾ. ಕೆ. ಎಸ್. ಭಟ್ ಇವರು ಮಾತನಾಡಿ, ನಮ್ಮ ಸಹೋದರಿ ಗುರುಪ್ರಿಯಾ ಇವರು ಪ್ರಾರಂಭಿಸಿರುವ ಸಂಗೀತ ತರಗತಿಯು ಇನ್ನಷ್ಟು ಹೆಸರುವಾಸಿಯಾಗಲಿ, ಇಲ್ಲಿ ಕಲಿತ0ತಹ ಮಕ್ಕಳು ಈ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಆಗಲಿ, ಯಾವುದೇ ಸಂದರ್ಭದಲ್ಲಿ ಈ ಕಲಾಕೇಂದ್ರಕ್ಕೆ ಬೇಕಾದ ಸಹಕಾರ ಪ್ರೋತ್ಸಾಹ ನಮ್ಮಿಂದ ಸಿಗುತ್ತದೆ ಎಂದು ಶುಭ ಹಾರೈಸಿದರು.

ಕನ್ನಡ ಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ, ಪ್ರಗತಿ ಸ್ಟಡಿ ಸೆಂಟರ್ ನ ಸಂಚಾಲಕರಾದ ಗೋಕುಲದಾಸ್, ಜಿಲ್ಲಾ ಯುವಜನಾ ಒಕ್ಕೂಟದ ಅಧ್ಯಕ್ಷರು, ಕಲಾಕೇಂದ್ರದ ಪ್ರೋತ್ಸಾಹಕರು ಸುರೇಶ ರೈ ಸೂಡಿಮುಳ್ಳು, ಹಿರಿಯ ಗಾಯಕರಾದ- ಶಿವಾನಂದ್ ಶೆಣೈ, ಚಂದ್ರಶೇಖರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗುರುಕುಲ ಕಲಾಕೇಂದ್ರ ದ ವಿದ್ಯಾರ್ಥಿಗಳಾದ ಶ್ರಾವ್ಯ, ರಕ್ಷಾ, ತೀರ್ಥನಾ, ಲಿಷಾ, ತನ್ವಿ ಇವರಿಂದ ಗೀತಾ ಗಾಯನವೂ ನಡೆಯಿತು. ಗುರುಕುಲ ಪರಿವಾರಕ್ಕೆ ಹೊಸದಾಗಿ ಸೇರಿದ ಮಕ್ಕಳಿಗೆ ಕಲಾಕೇಂದ್ರದ ವಿಶೇಷವಾಗಿ ಸ್ವಾಗತಿಸಲಾಯಿತು.

ಕಲಾಕೇಂದ್ರದ ಸಂಚಾಲಕಿ ಗುರುಪ್ರಿಯಾ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಲರ್ಸ್ ಕನ್ನಡ ವಾಹಿನಿಯ ಕನ್ನಡಕೋಗಿಲೆ ಖ್ಯಾತಿಯ ಅಪೇಕ್ಷಾ ಪೈ ಇವರಿಂದ ಹಾಡುಗಾರಿಕೆಯು ನಡೆಯಿತು. ಪ್ರಖ್ಯಾತಿ ಯುವತಿ ಮಂಡಲದ ದೀಪ್ತಿ ಬಲ್ನಾಡು ಅತಿಥಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಶಿವಾನಂದ ಕಾಮತ್ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಖ್ಯಾತಿ ಯುವತಿ ಮಂಡಲದ ಸಮೃದ್ಧಿ ಶೆಣೈ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಗುರುಕುಲ ಕಲಾಕೇಂದ್ರ ದ ಪೋಷಕರಾದ ವಿದ್ಯಾನಾಗೇಶ್ ನಾಯಕ್, ವಿಜಯ ಕಾಮತ್, ಕಲಾಕೇಂದ್ರದ ಸುಗಮ ಸಂಗೀತಕ್ಕೆ ಸೇರಿದ ನೂತನ ಮಕ್ಕಳ ಪೋಷಕರು ಹಾಗೂ ಕಲಾಭಿಮಾನಿಗಳು ಭಾಗವಹಿಸಿದ್ದರು.


























