ಪುತ್ತೂರು : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ, ಅಯ್ಯಪ್ಪ ಮಾಲಾಧಾರಿಯೋರ್ವರ ವಿರುದ್ಧ ಗಡಿಪಾರು ನೋಟೀಸ್ ಜಾರಿ ಮಾಡಿರುವ ಕುರಿತು ಹಿಂದೂ ಜಾಗರಣ ವೇದಿಕೆ ಖಂಡನೆ ವ್ಯಕ್ತಪಡಿಸಿದೆ.
ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಬಂಟುಕಲ್ಲು ನಿವಾಸಿ ಪ್ರವೀಶ್ ಕುಮಾರ್ (ಪ್ರವೇಶ ನಾಯರ್) ಎಂಬವರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಲಾಗಿದ್ದು, ಈ ಆದೇಶದ ವಿರುದ್ಧ ಹಿಂದೂ ಜಾಗರಣ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರವೀಶ್ ಮೇಲಿರುವ ಎಲ್ಲಾ ಪ್ರಕರಣಗಳು ಕೂಡ ಖುಲಾಸೆಗೊಂಡಿದ್ದು, ಪ್ರಸ್ತುತ ಯಾವುದೇ ಪ್ರಕರಣಗಳು ಕೂಡ ಇಲ್ಲದೇ ಇರುವಾಗ ಗಡಿಪಾರು ನೋಟೀಸ್ ಮಾಡಿರುವ ಇಲಾಖೆಯ ನಡೆಗೆ ಹಿಂದೂ ಜಾಗರಣ ವೇದಿಕೆ ಖಂಡನೆ ವ್ಯಕ್ತಪಡಿಸಿದೆ.


























