ಈಶ್ವರಮಂಗಲ : ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಸಕ್ರೀಯ ಕಾರ್ಯಕರ್ತ, ಅಯ್ಯಪ್ಪ ಮಾಲಾಧಾರಿ ಪ್ರವೀಶ್ ರವರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಿರುವ ಹಿನ್ನೆಲೆ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನೂರಾರು ಅಯ್ಯಪ್ಪ ಮಾಲಾಧಾರಿಗಳು, ಗ್ರಾಮದ ಭಕ್ತರು ಮತ್ತು ಸಂಘಟನೆಯ ಕಾರ್ಯಕರ್ತರು ಪ್ರಾತಃ ಕಾಲದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಸಕ್ರೀಯ ಕಾರ್ಯಕರ್ತ ಮತ್ತು ಅಯ್ಯಪ್ಪ ಮಾಲಾಧಾರಿ ಪ್ರವೀಶ್ ಬಂಟಕಲ್ಲು ಅವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲು ಮಾಡಿ ಗಡಿಪಾರು ನೋಟೀಸ್ ಜಾರಿ ಮಾಡಿದ ಅಧಿಕಾರಿಗಳು ಮತ್ತು ಅದಕ್ಕೆ ಪ್ರಚೋದನೆ ನೀಡಿದ ರಾಜಕೀಯ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


























