ಬೆಂಗಳೂರು : 30 ಸಾವಿರ ಬೆಲೆಯ ಸ್ಕೂಟಿ ಮೇಲೆ 3.22 ಲಕ್ಷ ರೂಪಾಯಿ ದಂಡವನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ವಿಧಿಸಿದ್ದಾರೆ.
ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದೆ. ಈ ಸ್ಕೂಟಿ ಮೂಲಕ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳ ಉಲ್ಲಂಘಿಸಲಾಗಿದೆ. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಅಂತಿದ್ದವರಿಗೆ ಇದು ಶಾಕಿಂಗ್ ಆಗಬಹುದು. ಯಾಕೆಂದರೆ ಕ್ಯಾಮರಾ ಕಣ್ಣಲ್ಲಿ ದಾಖಲಾದ ಕೇಸ್ಗಳು ಇದಾಗಿದೆ. ವಿತೌಟ್ ಹೆಲ್ಮೆಟ್, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 643 ಬಾರಿ ನಿಯಮಗಳ ಉಲ್ಲಂಘನೆ ಆಗಿದೆ. ಸದ್ಯ ಈ ವೆಹಿಕಲ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



























