ಸುಳ್ಯ : ಮನೆ ಮಗನೇ ಮನೆಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಳಿನ ಉಳುವಾರು ಯಲ್ಪಕಜೆ ಎಂಬಲ್ಲಿ ಮನೆಯನ್ನು ಹೊಂದಿದ್ದು, ಮಗ ಗಣೇಶ್ ಎಂಬಾತನು ವಿಪರೀತ ಮದ್ಯ ಸೇವನೆ ಮಾಡುವ ಚಟವುಳ್ಳ ವ್ಯಕ್ತಿಯಾಗಿದ್ದು, ಮಹಿಳೆ ಹಾಗೂ ಅವರ ಗಂಡನಿಗೆ ಕಿರುಕುಳ ನೀಡುತ್ತಿದ್ದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದುದರಿಂದ ಬೇಸತ್ತು ಅವರ ಸೊಸೆ ಮನೆಯಾದ ಸುಳ್ಯಕ್ಕೆ ಬಂದು ವಾಸವಾಗಿರುತ್ತಾರೆ.
ಡಿ.17 ರಂದು ಸಂಜೆ ಮನೆಯ ಪಕ್ಕದ ಸಂಬಂಧಿಕರು ಪೋನ್ ಮಾಡಿ ಗಣೇಶನು ಮನೆಗೆ ಬೆಂಕಿ ಹಚ್ಚಿರುವುದಾಗಿ ವಿಷಯ ತಿಳಿಸಿದ್ದು, ಅದರಂತೆ ಅರಂತೋಡಿಗೆ ಹೋಗಿ ನೋಡಿದಾಗ ಮನೆಯು ಸಂಪೂರ್ಣವಾಗಿ ಹತ್ತಿ ಉರಿದಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ : 139/2023 ಕಲಂ:506, 436 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























