ಉಪ್ಪಿನಂಗಡಿ : ಎಂ.ಡಿ.ಎಂ.ಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ವೇಳೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ಇಳಂತಿಲ ನಿವಾಸಿ ಯಾಸಿರ್ (29) ಬಂಧಿತ ಆರೋಪಿ.
ಡಿ.17 ರಂದು ಸಂಜೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ದರ್ಗಾ ಶರೀಫ್ ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿ ವಾಹನ ತಪಾಸಣೆಯ ನಿಮಿತ್ತ ಕಾರೊಂದನ್ನು ನಿಲ್ಲಿಸಿದಾಗ, ಅದರ ಚಾಲಕನು ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿರುತ್ತಾನೆ.
ಆತನನ್ನು ತಡೆದು ವಿಚಾರಿಸಿ, ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು ರೂ 13,000/- ಮೌಲ್ಯದ 6.4 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು ಪತ್ತೆಯಾಗಿರುತ್ತದೆ.
ಸದರಿ ಕಾರು, ಕಾರಿನಲ್ಲಿದ್ದ ಚಿಕ್ಕ ಎಲೆಕ್ಟ್ರೋನಿಕ್ ಡಿಜಿಟಲ್ ತೂಕ ಮಾಪನ ಸಾಧನ, 01 ಮೊಬೈಲ್ ಮತ್ತು ಎಂ.ಡಿ.ಎಂ.ಎ ಮಾದಕವಸ್ತುವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 168/2023 ಕಲಂ:, U/s-8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























