ಪುತ್ತೂರು : ಹಿಂದು ಜಾಗರಣ ವೇದಿಕೆ ಶಿವಾಜಿ ಶಾಖೆ, ಪುರುಷರಕಟ್ಟೆ ವತಿಯಿಂದ ಪುರೋಹಿತ ಶ್ರೀ ನಾರಾಯಣ ಐತಾಳ್ ನರಿಮೊಗರು ಇವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ ಡಿ.23 ರಂದು ಸಂಜೆ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನಡೆಯಲಿದೆ.
ರಾತ್ರಿ 8 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕೃಷಿಕರಾದ ಶರತ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಟೋಲಿ ಸದಸ್ಯರಾದ ಗಣರಾಜ್ ಭಟ್ ಕೆದಿಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಖ್ಯಾತ ವಕೀಲರಾದ ಚಿನ್ಮಯ ಈಶ್ವರಮಂಗಲ, ಯುವ ಧಾರ್ಮಿಕ ಮುಂದಾಳು ಗೀತೇಶ್ ಮಡಪ್ಪಾಡಿ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಯೋಧ್ಯೆ ಕರಸೇವಕರಿಗೆ ಹಾಗೂ ನಾಟಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9.30ರಿಂದ ‘ಕುಡ ಒಂಜಾಕ’ ನಾಟಕ ಮೂಡಿ ಬರಲಿದೆ.




























