ಪುತ್ತೂರು : ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನವೀನ್, ಉಪಾಧ್ಯಕ್ಷರಾಗಿ ಪವಿತ್ರರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಡಿ.20 ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನವೀನ್ ಡಿ.ಯವರನ್ನು ಜಯರಾಮ ಪೂಜಾರಿ ಸೂಚಿಸಿ, ದೇವಪ್ಪ ಅನುಮೋದಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪವಿತ್ರ ಕೆ.ಪಿಯವರನ್ನು ವಿಶ್ವನಾಥ ಬಲ್ಯಾಯ ಸೂಚಿಸಿ, ನಮಿತಾ ಅನುಮೋದಿಸಿದ್ದರು.

ನಿರ್ದೇಶಕರಾದ ದೇವಪ್ಪ ಪಜಿರೋಡಿ, ಪ್ರವೀಣ್ ಶೆಟ್ಟಿ, ಚಂದ್ರ ಕುಮಾರ್ ಮಣಿಯ, ಶಿವಪ್ರಸಾದ್ ನಾಯ್ಕ ಹಾಗೂ ಪರಮೇಶ್ವರ ಭಂಡಾರಿ ಉಪಸ್ಥಿತರಿದ್ದರು.

ಸಹಕಾರ ಇಲಾಖೆಯ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ಹಣಾಧಿಕಾರಿ ಮಧುಕರ ಎಚ್. ಹಾಗೂ ಸಿಬ್ಬಂದಿಗಳು ಸಹಕರಿಸಿದರು.

























