ಪುತ್ತೂರು : ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಅಧಿಕ ಮೈಲೆಜ್ ನೀಡುವ ಅಂತಾರಾಷ್ಟ್ರೀಯ ಖ್ಯಾತಿಯ ಶೆಲ್ ಫ್ಯೂಯೆಲ್ಸ್ ಸಂಸ್ಧೆ ಪುತ್ತೂರಿಗೂ ಲಗ್ಗೆ ಇಟ್ಟಿದ್ದು, ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರ್ ಬೈಪಾಸ್‌ನಲ್ಲಿ ನೂತನವಾಗಿ ಆರಂಭವಾಗಿರುವ ಪ್ರತಿಷ್ಠಿತ ತಿರುಮಲ ಫ್ಯೂಯೆಲ್ಸ್ ಡಿ.25 ರಂದು ಶುಭಾರಂಭಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಡೀಲರ್ ಮಾಲಕತ್ವದ (DODO) ಶೆಲ್ ಸಂಸ್ಥೆ ಇದಾಗಿದ್ದು, ಇಲ್ಲಿ ಎರಡು ರೀತಿಯ ಪೆಟ್ರೋಲ್ ಮತ್ತು ಡೀಸೆಲ್ ನಿಯಮಿತ ಮತ್ತು ವಿ-ಪವರ್ ಲಭ್ಯವಿದೆ.
ಉಚಿತ ಏರ್ ಶೆಲ್, ಉಚಿತ ಕಾರ್ಮಿಕರೊಂದಿಗೆ ಆಯಿಲ್ ಬದಲಾಯಿಸುವ ಸೌಲಭ್ಯವಿದೆ. ತಿರುಮಲ ಫ್ಯೂಯೆಲ್ಸ್ ಮಧ್ಯರಾತ್ರಿ 12.30 ರವರೆಗೆ ತೆರೆದಿರುತ್ತದೆ.
ತಿರುಮಲ ಫ್ಯೂಯೆಲ್ಸ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಲು ಬರುವ ಗ್ರಾಹಕರು ಬಗೆ ಬಗೆಯ ಪಾನೀಯ, ತಾಜಾ ಆಹಾರ ಸವಿಯಬಹುದಾಗಿದೆ.


























