ಕೈಕಂಬ : ಕಾರುಗಳಲ್ಲಿ ತೆರಳಿ ಮಂಗಳೂರಿನ ವಿವಿಧ ಕಡೆಗಳಿಂದ ದನಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್ನ ಇಮ್ರಾನ್ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ಮಸೀದಿಯ ಬಳಿಯ ನಾಸಿರ್ ಯಾನೆ ನಾಚಿ (26) ಎಂಬವರನ್ನು ಬಜಪೆ ಎಸ್ಐ ಕುಮಾರೇಶನ್ ನೇತೃತ್ವದ ತಂಡ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ಪೋಸ್ಟ್ನಲ್ಲಿ ಬಂಧಿಸಿದೆ.
ಬಂಧಿತರಿಂದ ದನ ಕಳವು ಮಾಡಲು ಬಳಸಿರುವ ಸುಮಾರು 10 ಲಕ್ಷ ರೂ. ಮೌಲ್ಯದ ನೀಲಿ ಬಣ್ಣದ ಸ್ವಿಫ್ಟ್ ಕಾರು, ಬಳಿ ಬಣ್ಣದ ರಿಡ್ಜ್ ಕಾರು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್ ಅವರ ಆದೇಶದಂತೆ ಎಸ್ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

























