ಪುತ್ತೂರು : ಹೊಳೆಗೆ ಕಾರು ಪಲ್ಟಿಯಾಗಿ ಜ್ಯೋತಿಷಿಗೆ ಗಾಯವಾದ ಘಟನೆ ಕಾಣಿಯೂರು ಸಮೀಪದ ಬೈತಡ್ಕ ಮಸೀದಿ ಸಮೀಪ ನಡೆದಿದೆ.

ಬೆಳಂದೂರಿನ ಜ್ಯೋತಿಷಿ ಪ್ರಸಾದ್ ಪಂಗಣ್ಣಾಯರ ಮಾರುತಿ ಕಾರು ಬೈತಡ್ಕ ಮಸೀದಿ ಸಮೀಪದ ಹೊಳೆಗೆ ಪಲ್ಟಿಯಾಗಿದ್ದು, ನೀರು ಕಡಿಮೆ ಇದ್ದ ಕಾರಣ ಅವಘಡ ತಪ್ಪಿದಂತಾಗಿದ್ದು, ಪಂಗಣ್ಣಾಯ ರವರು ಅಲ್ಪ-ಸ್ವಲ್ಪ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಳೆದ ವರ್ಷ ಜುಲೈ ನಲ್ಲಿ ಇದೇ ಸ್ಥಳದಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿತ್ತು.

























