ಮಹಾರಾಷ್ಟ್ರ ಮೂಲದ ಶಬ್ನಮ್ ಎಂಬ ಮುಸ್ಲಿಂ ಯುವತಿ ಮುಂಬೈನಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾಳೆ. ಆಕೆಯ ಪ್ರಯಾಣಕ್ಕೆ ಸ್ನೇಹಿತರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಸಾಥ್ ನೀಡಿದ್ದಾರೆ. ಇಲ್ಲಿಯವರೆಗೆ ಮೂವರು ಬರೋಬ್ಬರಿ 1,425 ಕಿಲೋ ಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.
ಶಬ್ನಮ್ ಶ್ರೀರಾಮನ ಅಚಲ ಭಕ್ತೆ. ನನಗೆ ಶ್ರೀರಾಮನ ಬಗ್ಗೆ ಹೆಮ್ಮೆ ಇದೆ. ಶ್ರೀರಾಮನ ಪೂಜಿಸಲು ಒಬ್ಬ ಹಿಂದೂನೇ ಆಗಬೇಕಿಲ್ಲ. ಇಲ್ಲಿ ಒಳ್ಳೆಯ ವ್ಯಕ್ತಿಯಾಗಿರುವುದು ಮುಖ್ಯ. ನಮ್ಮ ಪ್ರಯಾಣಕ್ಕೆ ಶ್ರೀರಾಮನ ಮೇಲಿನ ಭಕ್ತಿಯೇ ಸ್ಫೂರ್ತಿ ಎಂದು ಹೇಳಿದ್ದಾರೆ. ಅಂದ್ಹಾಗೆ ಶಬ್ನಮ್ ತಂಡವು ಪ್ರತಿ ದಿನ 25 ರಿಂದ 30 ಕಿಲೋ ಮೀಟರ್ ದೂರ ಪ್ರಯಾಣ ಬೆಳೆಸುತ್ತಿದ್ದು, ಸದ್ಯ ಮಧ್ಯಪ್ರದೇಶದ ಸಿಂಧವಾ ತಲುಪಿದ್ದಾರೆ.
ಸದ್ಯ ಈ ಮೂವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ತಮ್ಮ ತೀರ್ಥ ಯಾತ್ರೆ ವೇಳೆ ಯಾರನ್ನಲ್ಲೇ ಭೇಟಿ ಆಗ್ತಾರೋ, ಅವರೆಲ್ಲರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಶಬ್ನಮ್ ಹೇಳೋದು ಏನು..?
ಧರ್ಮ, ಜಾತಿ ಯಾವುದೇ ಆಗಿರಲಿ, ಪ್ರತಿಯೊಬ್ಬರ ಹೃದಯದಲ್ಲಿ ಶ್ರೀರಾಮ ಇದ್ದಾನೆ. ನಮ್ಮ ಮನೆಯಲ್ಲಿ ಎಲ್ಲರೂ ರಾಮನ ಭಕ್ತರೇ. ಇಲ್ಲಿ ಧರ್ಮ, ಜಾತಿ ಮುಖ್ಯವಲ್ಲ. ನಮ್ಮ ಯಾತ್ರೆಗೆ ಪೊಲೀಸರ ಸಹಾಯ ಕೂಡ ಸಿಕ್ಕಿದೆ. ಊಟ, ಮತ್ತಿತರ ವ್ಯವಸ್ಥೆ ಕಲ್ಪಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಮ್ಮನ್ನು ಸುರಕ್ಷತೆಯಿಂದ ನೋಡಿಕೊಂಡರು. ಕಷ್ಟಕರ ಸಂದರ್ಭಗಳಲ್ಲಿ ಸಹಾಯ ಮಾಡಿದರು ಎಂದರು. ಶಬ್ನಮ್ ಅಯೋಧ್ಯೆ ತಲುಪುವ ಯಾವುದೇ ನಿಗದಿತ ದಿನಾಂಕ ಸ್ಪಷ್ಟವಿಲ್ಲ.


























