ವಿಟ್ಲ : ಶ್ರೀ ಧರ್ಮಶಾಸ್ತ್ರ ಭಕ್ತವೃಂದ, ಶ್ರೀ ಭಗವತೀ ದೇವಸ್ಥಾನ ವಿಟ್ಲ ಹಾಗೂ ಶ್ರೀ ಮೋನಪ್ಪ ಗುರುಸ್ವಾಮಿಯವರ ನೇತೃತ್ವದಲ್ಲಿ ‘ಏಕಾಹ ಭಜನೆ’ ಜ.2 ಮಂಗಳವಾರ ಸುರ್ಯೋದಯದಿಂದ ಜ.3 ಬುಧವಾರ ಸುರ್ಯೋದಯದವರೆಗೆ ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯಲಿದೆ.
ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆಯ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಹಾಗೂ ವಿಟ್ಲ ಶ್ರೀ ಭಗವತೀ ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್.ವಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.



























