ಮೂಡಬಿದ್ರೆ : ಸ್ವರ್ಣ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಅಪಾರ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ 5ನೇ ಶಾಖೆಯು ಮೂಡಬಿದ್ರೆಯಲ್ಲಿ ಶುಭಾರಂಭಗೊಂಡಿತು.

1957ರಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ಸಂಸ್ಥೆಯು ಗುಣಮಟ್ಟ, ವಿಶ್ವಾಸ, ಹಾಗೂ ಗ್ರಾಹಕರ ಅಭಿಮಾನದೊಂದಿಗೆ 2007ರಲ್ಲಿ ಹಾಸನ, 2012ರಲ್ಲಿ ಸುಳ್ಯ, 2017ರಲ್ಲಿ ಕುಶಾಲನಗರದಲ್ಲಿ ತನ್ನ ಮಳಿಗೆಗಳನ್ನು ಪ್ರಾರಂಭಿಸಿ ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳ ಮಾರಾಟಕ್ಕೆ ಸಂಸ್ಥೆ ಹೆಸರುವಾಸಿಯಾಗಿದೆ.
ಸರಳ ಸಮಾರಂಭದೊಂದಿಗೆ ಜಿ.ಎಲ್. ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ವೈದಿಕ ವಿಧಿ ವಿಧಾನದೊಂದಿಗೆ ಶುಭಾರಂಭ ಕಾರ್ಯಕ್ರಮ ನೇರವೇರಿತು.



























