ಬಳ್ಳಾರಿ : ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ಕಾರಿನಲ್ಲಿ ಹಾರ ಬದಲಿಸಿಕೊಂಡು ಪ್ರೇಮಿಗಳು ಮದುವೆಯಾಗಿದ್ದಾರೆ. ಈ ಸಂಬಂಧ ಬಳ್ಳಾರಿ ಶಕ್ತಿಧಾಮ ಸಾಂತ್ವನ ಕೇಂದ್ರದ ಮುಂದೆ ಇಡೀ ರಾತ್ರಿ ದೊಡ್ಡ ಹೈಡ್ರಾಮಾ ನಡೆದಿದೆ.
ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಪ್ರೀತಿ ಮಾಡಿದ್ದರು. ಹೀಗಾಗಿ ಮದುವೆಯಾಗಲು ಸಿದ್ಧರಾಗಿದ್ದರು. ಇದಕ್ಕೆ ಯುವತಿ ಕಡೆ ಪೋಷಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ಇಬ್ಬರು ಕಾರಿನಲ್ಲಿ ಹಾರ ಬದಲಿಸಿಕೊಂಡು ಮದುವೆ ಆಗಿದ್ದಾರೆ. ಬಳಿಕ ಬಳ್ಳಾರಿಯಲ್ಲಿನ ಶಕ್ತಿಧಾಮದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.
ಈ ವೇಳೆ ಪ್ರಿಯತಮೆ ಒಂದು ಬಾರಿ ತನ್ನ ಪೋಷಕರು ಬೇಕೆಂದು ಮತ್ತೊಂದು ಬಾರಿ ಪ್ರಿಯಕರ ಬೇಕೆಂದು ಕಿರುಚಾಡಿ ಹೇಳುತ್ತಿದ್ದಳು. ಹೀಗಾಗಿ ಶಾಂತಿ ಧಾಮದ ಮುಂದೆ ದೊಡ್ಡ ಹೈಡ್ರಾಮಾ ನಡೆದಿದೆ.
ಸ್ಥಳಕ್ಕೆ ಬಂದಿದ್ದ ಎರಡು ಕಡೆಯ ಪೋಷಕರು, ಸಂಬಂಧಿ ಮಧ್ಯೆ ಗಲಾಟೆ ನಡೆದಿದೆ. ಯುವತಿಯನ್ನು ಎಳೆದೊಯ್ದ ಪೋಷಕರು ತಮ್ಮ ಕಾರಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ಇದಕ್ಕೆ ಒಪ್ಪದ ಯುವತಿ ಕಾರನ್ನು ಏರಲಿಲ್ಲ. ಗಂಡ ಬೇಕೆಂದು ಕಿರುಚಾಡಿದ್ದಾಳೆ. ಬಳಿಕ ಕಾರಿಗೆ ಅಡ್ಡಗಟ್ಟಿ ಪ್ರಿಯಕರ ಬಿಟ್ಟು ಬಿಡಿ ಎಂದು ಗೋಗರೆದಿದ್ದಾನೆ. ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದೆ.
ಇಬ್ಬರು ಒಬ್ಬರನ್ನ ಬಿಟ್ಟು ಒಬ್ಬರು ಇರದ ಕಾರಣ ಹಾಗೂ ಪ್ರೇಯಸಿನೂ ಬೇಕು, ರಕ್ಷಣೆಯೂ ಬೇಕು ಎಂದು ಇಡೀ ರಾತ್ರಿ ಯುವಕ ಸಾಂತ್ವನ ಕೇಂದ್ರದ ಮುಂದೆ ಕುಳಿತು ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಯುವತಿ ಪೋಷಕರಿಗೆ ಏನು ಮಾಡಬೇಕೆಂದು ಗೊತ್ತಾಗದೇ ಕೊನೆಗೆ ಯುವತಿಯನ್ನ ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ.



























