ಉಪ್ಪಿನಂಗಡಿ : ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಕಳವು ಮಾಡಲು ಯತ್ನಿಸಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಎಂ. ಔತಾಡ್ ಪ್ರೈವೇಟ್ ಲಿಮಿಟೆಡ್ ನ ಪ್ರೊಜೆಕ್ಟ್ ಮ್ಯಾನೇಜರ್ ಸಾಯಿರಾಮ್ ಎಂಬವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಎಸ್ ಎಂ ಔತಾಡ್ ಫ್ರೈ. ಲಿ. ಸಂಸ್ಥೆಯು ಪೆರಿಯಶಾಂತಿಯಿಂದ ಅಡ್ಡಹೊಳೆ ಎಂಬಲ್ಲಿಯವರೆಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸ ಮಾಡುತ್ತಿದ್ದು, ಜ.2 ರಂದು ಬೆಳಗಿನ ಜಾವ ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸುಮಾರು 1,10,750/- ರೂಪಾಯಿ ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಸುಮಾರು 3-4 ಜನ ಕಳ್ಳರು ಕಳವು ಮಾಡಿ ಪಿಕಪ್ ವಾಹನಕ್ಕೆ ಲೋಡ್ ಮಾಡಿ ಕಳವು ಮಾಡುತ್ತಿದ್ದು, ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ, ಕಳವು ಮಾಡಿದ ಸ್ವತ್ತುಗಳು, 3 ಮೊಬೈಲ್ ಫೋನ್ಗಳನ್ನು ಮತ್ತು ಮೋಟಾರು ಸೈಕಲನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 01/2024 ಕಲಂ: 379 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























