ಪುತ್ತೂರು : ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿ, ಪುತ್ತೂರು ಮತ್ತು ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ (ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ) ಇದರ ಅಂಗಸಂಸ್ಥೆಗಳು) ಇದರ ಆಶ್ರಯದಲ್ಲಿ ‘ಶ್ರೀರಾಮ ಕಥಾ ವೈಭವ’ ವೈಭವದ ಅಯೋಧ್ಯೆಯ ಸಮಗ್ರ ಕಥನ ಕಾರ್ಯಕ್ರಮ ಜ.14 ರಂದು ಸಂಜೆ ತೆಂಕಿಲ ವಿವೇಕನಗರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಆಮಂತ್ರಣ ಬಿಡುಗಡೆಗೊಳಿಸಿದರು.
ಈ ವೇಳೆ ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಎಸ್. ದಾಮೋದರ ಪಾಟಾಳಿ, ಉಪಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ವಿರೂಪಾಕ್ಷ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಶಿವಕುಮಾರ್ ಕಲ್ಲಿಮಾರ್, ಸಂತೋಷ್ ಬೋನಂತಾಯ, ರವಿ ನಾರಾಯಣ, ರಾಜೀ ಬಲರಾಮ ಆಚಾರ್ಯ, ಸುರೇಶ್ ಶೆಟ್ಟಿ, ರಂಜಿತಾ ಶಂಕರ್, ಪದ್ಮ ಕೆ.ಆರ್ ಆಚಾರ್ಯ, ನಿತಿನ್ ಕಲ್ಲೇಗ, ಸುಂದರ್ ಉಪಸ್ಥಿತರಿದ್ದರು.


























