ಸೋಮಾಲಿಯಾ ಕಡಲ ತೀರದಲ್ಲಿ ಭಾರತದ ಕಾರ್ಗೋ ಹಡಗನ್ನು ಹೈಜಾಕ್ ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ.
ಜನವರಿ 4 ರಂದು ಸಂಜೆ ಸರಕುಗಳನ್ನು ತುಂಬಿದ್ದ ‘MV LILA NORFOLK’ ಹಡಗನ್ನು ಹೈಜಾಕ್ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿಗಳು ಹಡಗಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಪಹರಿಸಿದ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿಗಳಿದ್ದು ಪ್ರಕರಣವನ್ನು ನೌಕಾಪಡೆಯು ಗಂಭೀರವಾಗಿ ತೆಗೆದುಕೊಂಡಿದೆ.
ಅರೆಬೀಯನ್ ಸಮುದ್ರದಲ್ಲಿ ಲಿಬೇರಿಯಾ ಧ್ವಜವಿದ್ದ ಬೃಹತ್ ಕ್ಯಾರಿಯರ್ನಲ್ಲಿ ಅಪಹರಣ ಮಾಡುವ ಪ್ರಯತ್ನ ನಡೆದಿದೆ. ಸದ್ಯ ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದ್ದು ಹಡಗಿನಲ್ಲಿರುವ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಿದೆ. ಐಎನ್‌ಎಸ್ ಚೆನ್ನೈ ಯುದ್ಧ ನೌಕೆಯು ಹೈಜಾಕ್ ಆದ ಹಡಗಿನ ಬಳಿ ತೆರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.