ಉಪ್ಪಿನಂಗಡಿ : ಲಾರಿ ಪಲ್ಟಿಯಾಗಿ ಪಾರ್ಸಲ್ ಸಾಮಾಗ್ರಿಗಳು ಜಖಂಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹೇಶ್ ಹಳೇಮನಿ ಎಂಬವರು ನೀಡಿರುವ ದೂರಿನ ಮೇರೆಗೆ ಲಾರಿ ಚಾಲಕ ಸಂತೋಷ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜ.4 ರಂದು ಬೆಳಗ್ಗೆ ಲಾರಿಯಲ್ಲಿ ಮಹೇಶ್ ಹಳೇಮನಿ ಮತ್ತು ಚಾಲಕ ಸಂತೋಷ್ ಬೆಂಗಳೂರು ನಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ರಾ.ಹೆ 48 ರಲ್ಲಿ ಬರುತ್ತಾ ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ತಿರುವಿನಲ್ಲಿ ತಲುಪಿದಾಗ ಲಾರಿ ಚಾಲಕ ಸಂತೋಷನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಲಾರಿ ಪಲ್ಟಿಯಾಗಿ ಜಖಂಗೊಂಡು ಲಾರಿಯೊಳಗೆ ತುಂಬಿಸಿದ ಪಾರ್ಸಲ್ ಸಾಮಾಗ್ರಿಗಳು ಜಖಂಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 03/2024 ಕಲಂ: 279 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























