ಬೆಳ್ಳಾರೆ : ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಉಡುಪಿ ನಿವಾಸಿ ರವೀಂದ್ರ ರೈ ಎಂಬವರು ನೀಡಿರುವ ದೂರಿನ ಮೇರೆಗೆ ಚಿತ್ರಪ್ರಭಾ ರೈ, ಸಂಪತ್ ರೈ, ರಾಜೇಶ್ ಶೆಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ರವೀಂದ್ರ ರೈ ಅವರು ಜ.6 ರಂದು ಮಧ್ಯಾಹ್ನ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೊಳ್ತಿಗೆ ಎಂಬಲ್ಲಿ ತಮ್ಮ ಜಮೀನನ್ನು ಸರ್ವೆಯರ್ ಮೂಲಕ ಅಳತೆ ಮಾಡಿಸಿ, ಜಮೀನಿನ ಗಡಿ ಗುರುತು ಮಾಡಿಸುತ್ತಿದ್ದಾಗ ಚಿತ್ರಪ್ರಭಾ ರೈ, ಸಂಪತ್ ರೈ ಮತ್ತು ರಾಜೇಶ್ ಶೆಟ್ಟಿ ಎಂಬವರು, ಸದ್ರಿಯವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ : 06/2024 ಕಲಂ 447 504 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























