ಧರ್ಮಸ್ಥಳ : ಅಕ್ರಮ ಮರಳು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಅಣಿಯೂರು ಎಂಬಲ್ಲಿ ನಡೆದಿದೆ.
ಜ.7 ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಅಣಿಯೂರು ಎಂಬಲ್ಲಿರುವ ಹೊಳೆಯಿಂದ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟ ಮಾಡುವ ಉದ್ದೇಶದಿಂದ ಮರಳು ರಾಶಿ ಹಾಕುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು(ಕಾ&ಸು) ಅನೀಲ್ ಕುಮಾರ್ ಡಿ ರವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ, ಸ್ಥಳದಲ್ಲಿ ಸುಮಾರು 15 ಪ್ಲಾಸ್ಟಿಕ್ ಬುಟ್ಟಿಯಷ್ಟು ರಾಶಿ ಹಾಕಿದ್ದ ಅಂದಾಜು ರೂ 1000/- ಮೌಲ್ಯದ ಮರಳು ರಾಶಿ ಹಾಗೂ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಪ್ಲಾಸ್ಟಿಕ್ ಬುಟ್ಟಿ ಸೇರಿದಂತೆ ಅಂದಾಜು ರೂ 2,250/- ರೂ ಮೌಲ್ಯದ ಇತರೆ ವಸ್ತುಗಳು ಕಂಡುಬಂದಿರುತ್ತದೆ. ಇವುಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 01/2024 ಕಲಂ: 379 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























