ಪೆರ್ನೆ : ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಗ್ಯಾರೇಜ್ ಗೆ ನುಗ್ಗಿದ ಘಟನೆ ಪೆರ್ನೆಯಲ್ಲಿ ನಡೆದಿದೆ.

ಪೆರ್ನೆಯ ಅಪ್ ನಲ್ಲಿ ನಿಲ್ಲಿಸಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಗ್ಯಾರೇಜ್ ನುಗ್ಗಿದ್ದು, ಘಟನೆಯಿಂದಾಗಿ ಗ್ಯಾರೇಜ್ ಗೆ ಹಾನಿಯುಂಟಾಗಿದೆ.

ಘಟನೆಯಿಂದಾಗಿ ಮುಂಭಾಗದಿಂದ ಬರುತ್ತಿದ್ದ ಪಿಕಪ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



























