ಪುತ್ತೂರು : ಸೆವೆನ್ ಡೈಮಂಡ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ (ರಿ) ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಆಯ್ದ ಆಹ್ವಾನಿತ 8 ತಂಡಗಳ, ಹೊನಲು ಬೆಳಕಿನ ಲೀಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾಟ ಫೆ.10 ರಂದು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಈ ಹಿನ್ನೆಲೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಜುಲಿಯನ್ ಪೀಟರ್, ಅಧ್ಯಕ್ಷರಾಗಿ ಶರತ್ ಆಳ್ವ ಕೂರೇಳು, ಕಾರ್ಯಾಧ್ಯಕ್ಷರಾಗಿ ಗಣೇಶ್ ರೈ ಮುಂಡಾಸು, ಪ್ರ.ಕಾರ್ಯದರ್ಶಿಯಾಗಿ ಪ್ರದೀಪ್ ಪಿ.ಆರ್., ಜೊತೆಕಾರ್ಯದರ್ಶಿಯಾಗಿ ಶರತ್ ರೈ ಮುಂಡಾಸು, ಖಜಾಂಜಿಯಾಗಿ ಗುಣಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಮೋಹನ್ ಕೆ, ರಾಧಾಕೃಷ್ಣ ಎ.ಎಸ್.ಐ ಪುತ್ತೂರು ರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಶಿವರಾಂ ಭಟ್ ಪರ್ಲಂಪಡಿ, ಪ್ರಕಾಶ್ ಪಿ.ಎಸ್.ಐ., ರಾಧಾಕೃಷ್ಣ ರೈ ಮುಂಡಾಸ್, ಉಜ್ವಲ್ ಶೆಟ್ಟಿ ಪುತ್ತೂರು, ಬೇಬಿ ಜಾನ್, ಮೋನಪ್ಪ ಪಟ್ಟೆ, ಪ್ರಶಾಂತ್ ರೈ ಕೈಕಾರ, ರಾಕೇಶ್ ರೈ ರನ್ನು ಆಯ್ಕೆ ಮಾಡಲಾಯಿತು.
ಕ್ರೀಡಾ ಸಂಚಾಲಕರಾಗಿ ಅನೂಪ್, ರಫೀಕ್ ಅತೂರು, ನವನೀತ್ ಬಜಾಜ್, ಕಿರಣ್ ರೈ ಕೈಕಾರ, ನಂದ ಪಟ್ಟೆ, ಗುರುಕಿರಣ್, ಪ್ರಮೋದ್ ಉಪ್ಪಳಿಗೆ, ಸವೀಣ್ ಪುತ್ತೂರು, ಸಂಜೀವ, ಶರತ್ ಕೂರೇಳು, ಸುಹಾಸ್ ಉಪ್ಪಿನಂಗಡಿ, ಅಶ್ವಿನ್ ಪರ್ಪುಂಜ, ಅಕ್ಷಯ್ ಅಯ್ಕೆಯಾದರು.


























