ಬೆಂಗಳೂರು : ಸ್ಟಾರ್ಟ್ ಅಪ್ ಮಹಿಳಾ ಸಿಇಒ ಕೈಯಿಂದ ಹತ್ಯೆಯಾದ ಮಗುವಿನ ಅಂತ್ಯಕ್ರಿಯೆ ಇಂದು ಹರಿಶ್ಚಂದ್ರ ಘಾಟ್ನಲ್ಲಿ ನಡೆದಿದೆ.
ಮಗುವಿನ ತಂದೆ ವೆಂಕಟರಮಣ ಮತ್ತು ಸಂಬಂಧಿಕರು ವಿಧಿ ವಿಧಾನಗಳ ಮೂಲಕ ಕೊನೆಯ ಕಾರ್ಯ ಮಾಡಿದ್ದಾರೆ. ತಂದೆ ವೆಂಕಟರಮಣ ಮಗುವನ್ನು ಹರಿಶ್ಚಂದ್ರ ಫಾಟ್ಗೆ ಕೊಂಡೊಯ್ದು ಕಣ್ಣೀರಿನಲ್ಲಿ ಅಂತಿಮ ವಿದಾಯ ಹೇಳಿದ್ದಾರೆ.
ನಿನ್ನೆ ಹಿರಿಯೂರಿನ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಐಮಂಗಲ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಮಗುವಿನ ಮೃತದೇಹ ರವಾನಿಸಲಾಗಿತ್ತು. ಮಧ್ಯರಾತ್ರಿ 1:45ಕ್ಕೆ ಮಗುವಿನ ಮೃತದೇಹ ಬಂದಿತ್ತು.
ಯಶವಂತಪುರ ಬಳಿ ಇರುವ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿ ತಂದೆ ವೆಂಕಟರಮಣ ನಿವಾಸವಿದ್ದು, ಮಗುವಿನ ತಂದೆ ಮತ್ತು ಕುಟುಂಬಸ್ಥರಿಂದ ಅಂತ್ಯಕ್ರಿಯೆ ನಡೆದಿದೆ.