ವಿಮಾನದ ಶೌಚಾಲಯದ ಡಸ್ಟ್ಬಿನ್ನಲ್ಲಿ 2 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ದುಬೈನಿಂದ ಕೇರಳದ ಕರಿಪುರಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನದ ಶೌಚಾಲಯದ ಡಸ್ಟ್ಬಿನ್ನಲ್ಲಿ ಚಿನ್ನ ಸಿಕ್ಕಿದೆ.
ಸುಮಾರು 3 ಕೆಜಿ ತೂಕದ 28 ಚಿನ್ನದ ಬಾರ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಗಳು ಬಂಧನದ ಭೀತಿಯಿಂದ ಚಿನ್ನವನ್ನ ವಿಮಾನದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.



























